LATEST NEWS
ಅಂತಹ ಕಿಡಿಗೇಡಿಗಳನ್ನ ನಾನು ಹೇಟ್ ಮಾಡ್ತೀನಿ – ಶಿಕ್ಷಣ ಸಚಿವ ಮಧುಬಂಗಾರಪ್ಪ

ಮಂಗಳೂರು ಸೆಪ್ಟೆಂಬರ್ 24: ಸುಮ್ಮನೆ ಬುರುಡೆ ಬಿಟ್ಟುಕೊಂಡು, ಪಬ್ಲಿಸಿಟಿಗಾಗಿ ಪ್ರಣವಾನಂದ ಸ್ವಾಮೀಜಿಯ ತಿರುಗಾಡುತ್ತಿದ್ದು ಜನರನ್ನ ತಪ್ಪು ಹಾದಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ಪ್ರಣವಾನಂದ ಸ್ವಾಮೀಜಿ ನಮ್ಮ ಸಮುದಾಯದ ನಾಯಕ ಅಲ್ಲ,ಸುಮ್ಮನೆ ಬುರುಡೆ ಬಿಟ್ಟುಕೊಂಡು ತಿರುಗುವ ಪ್ರಣವಾನಂದ ಸ್ವಾಮೀಜಿಯ ಹಿನ್ನಲೆ ಕೆದಕಿದ್ರೆ ಒಳ್ಳೆಯದು ಎಂದ ಅವರು ಕೇವಲ ಪಬ್ಲಿಸಿಟಿಗಾಗಿ ತಿರುಗಾಡುತ್ತಿದ್ದಾರೆ. ಅವರಿಗೆ ಪೀಠ ಕೊಟ್ಟಿದ್ದು ಯಾರು ಅಂತ ಗೊತ್ತಿಲ್ಲ. ನಾನು ಅವರನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ, ಅಲ್ಲದೆ ನಾನು ಯಾವುದೇ ಸ್ವಾಮಿಜಿ ಅವರನ್ನು ಬಳಸಿಕೊಂಡು ಮತ ಕೇಳಿಲ್ಲ ಎಂದು ಹೇಳಿದರು.

ಬಿಕೆ ಹರಿಪ್ರಸಾದ್ ಅವರು ಹಿಂದುಳಿದ ವರ್ಗದ ಮೇಲಿನ ಕಾಳಜಿಯಿಂದ ಬಿ ಕೆ ಮಾತನಾಡ್ತಾರೆ. ಆದರೆ ಪ್ರಣವಾನಂದ ಮಾತಾಡೋದು ಕೇವಲ ಪಬ್ಲಿಸಿಟಿಗಾಗಿ ಮಾತನಾಡುತ್ತಿದ್ದಾರೆ. ಸಮಾಜವನ್ನು ಹಾದಿಯನ್ನ ಯಾರೇ ತಪ್ಪಿಸಿದ್ರೂ ಅಂಥವರನ್ನು ಕಟ್ ಮಾಡಬೇಕು, ಅಂತಹ ಕಿಡಿಗೇಡಿಗಳನ್ನ ನಾನು ಹೇಟ್ ಮಾಡ್ತೀನಿ ಎಂದರು.
https://youtu.be/oDPa-iPqnCU