Connect with us

UDUPI

ಕನಕನಿಗೆ ಒಲಿದ ಕೃಷ್ಣನನ್ನು ಅರಗಿಸಿಕೊಳ್ಳಲು ಬುದ್ಧಿಜೀವಿಗಳಿಗಾಗುತ್ತಿಲ್ಲ- ಪೇಜಾವರ ಶ್ರೀ ಕಿಡಿ.

ಕನಕನಿಗೆ ಒಲಿದ ಕೃಷ್ಣನನ್ನು ಅರಗಿಸಿಕೊಳ್ಳಲು ಬುದ್ಧಿಜೀವಿಗಳಿಗಾಗುತ್ತಿಲ್ಲ- ಪೇಜಾವರ ಶ್ರೀ ಕಿಡಿ.

ಉಡುಪಿ,ನವಂಬರ್ 6: ಕನಕದಾಸರ ಭಕ್ತಿಗೆ ಒಲಿದು ಉಡುಪಿಯಲ್ಲಿ ಕೃಷ್ಣ ಪಶ್ಚಿಮಕ್ಕೆ ಮುಖಮಾಡಿರುವುದು ನಿಜ ಸಂಗತಿಯಾಗಿದೆ. ಆದರೆ ಈ ನಿಜವನ್ನು ಒಪ್ಪಿಕೊಳ್ಳಲು ಕೆಲ ಬುದ್ಧಿಜೀವಿಗಳು ಹಾಗೂ ಸನಾತನಿಗಳು ತಯಾರಿಲ್ಲ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆಲ ಸನಾತನಿಗಳು ಹಾಗೂ ಬುದ್ಧಿಜೀವಿಗಳು ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡುತ್ತಿದ್ದಾರೆ. ಈ ವ್ಯಕ್ತಿಗಳು ಪ್ರಾಚೀನವಾದುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೆ ಅಲ್ಲಗಳೆಯುತ್ತಿದ್ದಾರೆ. ಕನಕದಾಸರ ಭಕ್ತಿಗೆ ಒಲಿದೇ ಉಡುಪಿಯಲ್ಲಿ ಕೃಷ್ಣ ತನ್ನ ಮುಖವನ್ನು ಪಶ್ಚಿಮಕ್ಕೆ ತಿರುಗಿಸಿದ್ದಾನೆ. ಸನಾತನಿಗಳು ಪುರಂದರದಾಸ, ಮಧ್ವಾಚಾರ್ಯರ ಪವಾಡಗಳನ್ನು ಒಪ್ಪುತ್ತಾರೆ ಆದರೆ ಕನಕದಾಸರ ಪವಾಡವನ್ನು ಯಾಕೆ ಒಪ್ಪುತ್ತಿಲ್ಲ ಎಂದು ಅವರು ಪ್ರಶ್ನಿಸಿದರು. ನಾನೂರು ವರ್ಷಗಳ ಹಿಂದೆ ಅಷ್ಟಮಠಗಳ ಪ್ರಮುಖರಾಗಿದ್ದ ವಾದಿರಾಜರು ರಚಿಸಿದ ಹಾಡುಗಳಲ್ಲಿ ಈ ಬಗ್ಗೆ ಸ್ಪಷ್ಟನೆಯಿದೆ ಎಂದ ಅವರು ಇನ್ನಾದರೂ ಕನಕದಾಸ ಹಾಗೂ ಕೃಷ್ಣನ ನಡುವೆ ಇರುವ ಚರ್ಚೆಗೆ ತೆರೆ ಎಳೆಯಬೇಕಿದೆ ಎಂದರು.

Facebook Comments

comments