Connect with us

  FILM

  ಲೋಕಸಭೆ ಚುನಾವಣೆಗೆ ಕ್ವೀನ್ ಕಂಗನಾ ರಣಾವತ್ ಸ್ಪರ್ಧೆ..!!

  ದೆಹಲಿ ಮಾರ್ಚ್ 24: ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಬಿಜೆಪಿ ಈ ಬಾರಿ ಲೋಕಸಭೆ ಟಿಕೆಟ್ ನೀಡಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ರಣಾವತ್ ಸ್ಪರ್ಧೆ ಮಾಡಲಿದ್ದಾರೆ.


  ಇಂದು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಕಂಗನಾ ರಣಾವತ್​ ಅವರಿಗೆ ಈಗ ಬಿಜೆಪಿ ಟಿಕೆಟ್​ ನೀಡಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಧಿಕೃತವಾಗಿ ಕಂಗನಾ ರಣಾವತ್​ ಅವರು ರಾಜಕೀಯದ ಅಖಾಡಕ್ಕೆ ಇಳಿಯುತ್ತಿದ್ದಾರೆ.

  ‘ನಾನು ರಾಜಕೀಯಕ್ಕೆ ಎಂಟ್ರಿ ನೀಡುವುದಾದರೆ ಇದು ಸೂಕ್ತ ಸಮಯ’ ಎಂದು ಕಂಗನಾ ರಣಾವತ್​ ಅವರು ಇತ್ತೀಚೆಗೆ ಹೇಳಿದ್ದರು. ಆ ಮೂಲಕ ಅವರು ಸೂಚನೆ ನೀಡಿದ್ದರು. ಜನರ ಊಹೆ ಈಗ ನಿಜವಾಗಿದೆ. ಮೂಲತಃ ಹಿಮಾಚಲ ಪ್ರದೇಶದವರಾದ ಕಂಗನಾಗೆ ಮಂಡಿ ಕ್ಷೇತ್ರದ ಟಿಕೆಟ್​ ಸಿಕ್ಕಿದೆ.

  Share Information
  Advertisement
  Click to comment

  You must be logged in to post a comment Login

  Leave a Reply