Connect with us

  DAKSHINA KANNADA

  ಪುತ್ತೂರಿನಲ್ಲಿ ಕಾರಿನಲ್ಲಿ ಅಕ್ರಮ ಗೋ ಸಾಗಾಟ, ಸಂಘಟನೆಯ ಕಾರ್ಯಕರ್ತರನ್ನು ಕಂಡು ಕಾರು ದನಗಳನ್ನು ಬಿಟ್ಟು ತಂಡ ಪರಾರಿ..!

  ಪುತ್ತೂರು: ಪುತ್ತೂರಿನಲ್ಲಿ ಅಕ್ರಮ ಗೋ ಸಾಗಾಟದ ಜಾಲವನ್ನು ಬಜರಂಗದಳ ಬಯಲಿಗೆಳೆದಿದ್ದು, ಸಂಘಟನೆಯ ಕಾರ್ಯಕರ್ತರನ್ನು ನೋಡಿ ಆರೋಪಿಗಳು ಕಾರು , ದನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

  ಪುತ್ತೂರಿನ ಕಬಕ ಅಡ್ಯಲಾಯ ದೈವಸ್ಥಾನದ ಸಮೀಪವೇ ಈ ಕೃತ್ಯ ನಡೆದಿದೆ. ಕಾರಿನಲ್ಲಿ ನಾಲ್ಕು ಗೋವುಗಳು ಪತ್ತೆಯಾಗಿದ್ದು, ಕಾರು ಚಾಲಕ ಹಾಗೂ ಕಾರಿನಲ್ಲಿದ್ದವರು ಕಾರು ಹಾಗೂ ಗೋವುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
  ಬಜರಂಗದಳ ಕಬಕದ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದು ಜಖಂಗೊಂಡಿದೆ.
  ಕಾರಿನಲ್ಲಿ ಎರಡು ದನ ಹಾಗೂ ಎರಡು ಕರು ಪತ್ತೆಯಾಗಿದೆ. ಅದರ ಕಾಲುಗಳನ್ನು ಹಿಂಸಾತ್ಮಕ ರಿತಿಯಲ್ಲಿ ಕಟ್ಟಲಾಗಿತ್ತು. ಹಿಂಸಾತ್ಮಕವಾಗಿ ಗೋವುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ .

  ಈ ವೇಳೆ ಕಾರು ಸಮೇತ ಚಾಲಕ ಪರಾರಿಯಾಗಲು ಯತ್ನಿಸಿದಾಗ ಕಾರು ಚರಂಡಿಗೆ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಠಾಣಾ ಪೊಲೀಸ್ ಅಧಿಕಾರಿಗಳು ನಾಲ್ಕು ಗೋವುಗಳನ್ನು ಮತ್ತು ಜಖಂಗೊಂಡ ವಾಹನವನ್ನು ಪುತ್ತೂರು ನಗರ ಠಾಣೆಗೆ ಸಾಗಿಸಿದ್ದಾರೆ. ಗೋವುಗಳಿಗೆ ನೀರು ಮೇವು ನೀಡಿ ಬಜರಂಗದಳದ ಕಾರ್ಯಕರ್ತರು ವ್ಯವಸ್ಥೆ ಮಾಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply