Connect with us

    LATEST NEWS

    ಪಾರ್ಟ್ ಟೈಂ ಜಾಬ್ ಎಂದು ನಂಬಿಸಿ 1.15 ಲಕ್ಷ ವಸೂಲಿ ಮಾಡಿದ್ದ ಆರೋಪಿ ರಾಜಸ್ಥಾನದಲ್ಲಿ ಪೊಲೀಸ್ ಬಲೆಗೆ

    ಮಂಗಳೂರು ಮಾರ್ಚ್ 24: ಸೈಬರ್ ಕ್ರೈಂ ಗೆ ಸಂಬಂಧಿಸಿದಂತೆ ಮಂಗಳೂರಿನ ಸೆನ್ ಪೊಲೀಸರು ಆರೋಪಿಯೊಬ್ಬನನ್ನು  ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ವಾಟ್ಸಾಪ್ ನಲ್ಲಿ ಪಾರ್ಟ್ ಜಾಬ್ ಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ 1.15 ಲಕ್ಷ ಹಣ ವಂಚನೆ ಪ್ರಕರಣದಲ್ಲಿ ಈ ಬಂಧನವಾಗಿದೆ.


    ಬಂಧಿತ ಆರೋಪಿಯನ್ನು ರಾಜಸ್ಥಾನದ ಜೋದ್ ಪುರ್ ಜಿಲ್ಲೆಯ ಸದ್ದಾಂ ಗೌರಿ @ ಬಾವುರಿ ಎಂದು ಗುರುತಿಸಲಾಗಿದೆ. ಆರೋಪಿ ವಾಟ್ಸ್ ಆಫ್ ನಲ್ಲಿ ಪಾರ್ಟ್ ಟೈಮ್ ಜಾಬ್ ಇರುವುದಾಗಿ ಪಿರ್ಯಾದಿದಾರಿಗೆ ಸಂದೇಶ ಕಳುಹಿಸಿ ಪಾರ್ಟ ಟೈಂ ಜಾಬ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಈ ಲಿಂಕ್ ಮುಖಾಂತರ ಹಣ ತೊಡಗಿಸಿ, ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಮಾಡಬಹುದು ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರಿಂದ ಒಟ್ಟು 1,15,000 ಹಣ ಪಡೆದು ವಂಚನೆ ಮಾಡಿದ್ದಾನೆ.

    ಆರೋಪಿತನಿಂದ ಕೃತ್ಯಕ್ಕೆ ಬಳಸಿದ ವಿವೋ ಕಂಪನಿಯ ಮೊಬೈಲ್ ಫೋನ್ -02 ಡೆಬಿಟ್ ಕಾರ್ಡ್ ಗಳು-08, ಬ್ಯಾಂಕ್ ಚೆಕ್ ಬುಕ್ ಗಳು-04, ಆಧಾರ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply