FILM
ನಟಿ ಶೃತಿ ಹಾಸನ್ ಜೊತೆ ಗಾಯಕ ಸಂಚಿತ್ ಹೆಗ್ಡೆ ಲಿಪ್ ಲಾಕ್….!!
ಬೆಂಗಳೂರು : ಸದ್ಯ ಕರ್ನಾಟಕದ ಟಾಪ್ ಸಿಂಗರ್ ಆಗಿರುವ ಸಂಚಿತ್ ಹೆಗ್ಡೆ ಈಗ ನಟನೆಗೂ ಕೈ ಹಾಕಿದ್ದು, ತೆಲುಗಿನ ಪಿಟ್ಟ ಕಥಲು ಚಿತ್ರದ ಮೂಲಕ ನಟನೆಗೆ ಇಳಿದಿರುವ ಸಂಚಿತ್ ಹೆಗ್ಡೆ ಮೊದಲ ಪ್ರಯತ್ನದಲ್ಲೇ ನಟಿ ಶೃತಿ ಹಾಸನ್ ಗೆ ಲಿಪ್ ಲಾಕ್ ಮಾಡುವ ಮೂಲಕ ಈಗ ಸುದ್ದಿಯಲ್ಲಿದ್ದಾರೆ.
ರಿಯಾಲಿಟಿ ಶೋ ಸರಿಗಮಪ ಮೂಲಕ ತಮ್ಮ ಗಾಯನ ಪ್ರತಿಭೆಯನ್ನು ಸಾರಿದ್ದ ಸಂಚಿತ್ ಹೆಗ್ಡೆ ಅವರು ನಂತರ ಸ್ಯಾಂಡಲ್ವುಡ್ ನಲ್ಲಿ ಹಲವು ಸೂಪರ್ ಹಿಟ್ ಗೀತೆಗಳನ್ನು ನೀಡಿದ್ದಾರೆ. ಇದೀಗ ತೆಲುಗಿನ ಪಿಟ್ಟ ಕಥಲು ಚಿತ್ರದ ಮೂಲಕ ನಟನೆಗೆ ಇಳಿದಿರುವ ಸಂಚಿತ್ ಹೆಗ್ಡೆ ಮೊದಲ ಚಿತ್ರದಲ್ಲೇ ನಟಿ ಶೃತಿ ಹಾಸನ್ ಜೊತೆ ಲಿಪ್ ಲಾಕ್ ಮಾಡಿದ್ದು ಇಬ್ಬರು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಿನ್ನೆ ಪಿಟ್ಟ ಕಥಲು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸದ್ಯ ವೈರಲ್ ಆಗಿದೆ. ಫೆಬ್ರವರಿ 19ರಂದು ಪಿಟ್ಟ ಕಥಲು ಚಿತ್ರ ಓಟಿಟಿ ನೆಟ್ ಫ್ಲಿಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ. ನಾಲ್ಕು ಕಥೆಗಳ ಪಿಟ್ಟ ಕಥಲು ಚಿತ್ರದಲ್ಲಿ ತೆಲುಗಿನ ಖ್ಯಾತ ನಟ ಜಗಪತಿ ಬಾಬು, ಶೃತಿ ಹಾಸನ್, ಅಮಲಾ ಪೌಲ್ ಮತ್ತು ಲಕ್ಷ್ಮಿ ಮಂಚು ಅಭಿನಯಿಸಿದ್ದಾರೆ.
You must be logged in to post a comment Login