Connect with us

LATEST NEWS

ಅಪರೂಪದ ಶಸ್ತ್ರ ಚಿಕಿತ್ಸೆ ಮೂಲಕ ಸಯಾಮಿ ಬೆಕ್ಕುಗಳನ್ನು ಬೇರ್ಪಡಿಸಿದ ಪಶುವೈದ್ಯ

ಮಂಗಳೂರು : ಅಪರೂಪದ ಪ್ರಕರಣವೊಂದರಲ್ಲಿ ಸಯಾಮಿ ಅವಳಿ ಬೆಕ್ಕುಗಳನ್ನು ಪಶುವೈದ್ಯರೋಬ್ಬರು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ನಗರದ ಅಡ್ಯಾರ್​ನಲ್ಲಿರುವ ಪಶು ಚಿಕಿತ್ಸಾಲಯದಲ್ಲಿ ಅಪರೂಪದ ಶಸ್ತ್ರ ಚಿಕಿತ್ಸೆ ನಡೆದಿದೆ.


ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ನಿವಾಸಿಯೊಬ್ಬರು ಸಾಕಿದ ಪರ್ಷಿಯನ್ ತಳಿಯ ಬೆಕ್ಕೊಂದು 5 ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದರಲ್ಲಿ 4 ಬೆಕ್ಕಿನ ಮರಿಗಳು ವಿಶಿಷ್ಟ ಸಯಾಮಿ ಅವಳಿಗಳಾಗಿ ಜನಿಸಿದ್ದವು.


ಬೆಕ್ಕನ್ನು ಪರೀಕ್ಷಿಸಿದ ಅಡ್ಯಾರ್​ನ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕೆ.ಪ್ರಮೋದ್ ಅವರು, ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲು ನಿರ್ಧರಿಸಿದ್ದಾರೆ. ಮಂಗಳವಾರ ಈ ಸಯಾಮಿ ಬೆಕ್ಕುಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಬೇರ್ಪಡಿಸಿ, ವಾರಸುದಾರರಿಗೆ ನೀಡಿದ್ದಾರೆ.


ಇದಕ್ಕೂ ಮೊದಲು ಬೆಕ್ಕು ಸಾಕಿದ ವ್ಯಕ್ತಿ ವಿವಿಧ ಪಶು ಚಿಕಿತ್ಸಾಲಯಕ್ಕೆ ಹೋದರೂ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ಇಲ್ಲವೆಂದು ಹೇಳಿದ್ದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *