LATEST NEWS
ನಾಳೆ ಕರಾವಳಿಯಾದ್ಯಂತ ಭಾರಿ ಮಳೆ ಸಂಭವ- ಹವಾಮಾನ ಇಲಾಖೆ

ನಾಳೆ ಕರಾವಳಿಯಾದ್ಯಂತ ಭಾರಿ ಮಳೆ ಸಂಭವ- ಹವಾಮಾನ ಇಲಾಖೆ
ಮಂಗಳೂರು ಎಪ್ರಿಲ್ 20: ತೆಲಂಗಾಣದಿಂದ ತಮಿಳುನಾಡಿನವರೆಗೂ ಮೋಡಗಳ ಸಾಲು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ತಿಳಿಸಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಹಾಗೂ ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ದಕ್ಷಿಣಕನ್ನಡ, ಉಡುಪಿ, ಗೋಕರ್ಣ ಸಮುದ್ರ ತೀರದಲ್ಲಿ ಈ ಸಂದರ್ಭದಲ್ಲಿ ಭಾರಿ ಅಲೆಗೆಳುವ ಸಾಧ್ಯತೆ ಇದ್ದು ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸಮುದ್ರದಲ್ಲಿ ಸುಮಾರು 2 ರಿಂದ 2.5 ಮೀ ಎತ್ತರ ಅಲೆಗಳ ಏಳುವುದರಿಂದ ಮೀನುಗಾರರು ತಮ್ಮ ಮೀನುಗಾರಿಕಾ ಬೋಟ್ ಗಳನ್ನು ಸರಿಯಾಗಿ ಲಂಗರು ಹಾಕಲು ಹವಮಾನ ಇಲಾಖೆ ಸೂಚಿಸಿದೆ.
ಮಳೆಯ ಜೊತೆ ಗುಡುಗು, ಮಿಂಚು ಹಾಗೂ ಬಾರಿ ಗಾಳಿ ಬೀಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಕೂಡ ಮೋಡ ಕವಿದ ವಾತಾವರಣವಿರಲಿದ್ದು. ಅಲ್ಲಲ್ಲಿ ಚುದುರಿದ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.