Connect with us

    LATEST NEWS

    ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರ ಶಶಿಧರ್ ಶೆಟ್ಟಿ ಕೊಳಂಬೆ ಬಿಜೆಪಿ ಸೇರ್ಪಡೆ

    ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರ ಶಶಿಧರ್ ಶೆಟ್ಟಿ ಕೊಳಂಬೆ ಬಿಜೆಪಿ ಸೇರ್ಪಡೆ

    ಮಂಗಳೂರು ಎಪ್ರಿಲ್ 20: ಮಾಜಿ ಶಾಸಕ ಕಾಂಗ್ರೇಸ್ ಮುಖಂಡ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರ ವಿಜಯ ಕುಮಾರ ಶೆಟ್ಟಿ ಅವರಿಗೆ ಕಾಂಗ್ರೇಸ್ ಅವಮಾನ ಮಾಡಿದೆ ಎಂದು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟಗಾರ ಶಶಿಧರ್ ಶೆಟ್ಟಿ ಕೊಳಂಬೆ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾನು ಕಾಂಗ್ರೇಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಲಿದ್ದೇನೆ ಎಂದು ಅವರು ತಿಳಿಸಿದರು.

    ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಶಾಸಕ ಹಿರಿಯ ಕಾಂಗ್ರೇಸ್ ಮುಖಂಡ ವಿಜಯ ಕುಮಾರ ಶೆಟ್ಟಿ ಅವರಿಗೆ ಕಾಂಗ್ರೇಸ್ ಅವಮಾನ ಮಾಡಿದೆ, ಈ ಹಿನ್ನಲೆಯಲ್ಲಿ ನಾನು ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತಿದ್ದೆನೆ ಎಂದು ತಿಳಿಸಿದರು.

    ಎತ್ತಿನಹೊಳೆ ಯೋಜನೆ ನಿಲ್ಲಿಸುವ ಬಗ್ಗೆ ಬಿಜೆಪಿ ಮುಖಂಡರ ಜೊತೆ ಈಗಾಗಲೇ ಚರ್ಚಿಸಿದ್ದೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply