BANTWAL
ಅನ್ವರ್ ಮಾಣಿಪ್ಪಾಡಿ ವರದಿ ಸದನದಲ್ಲಿ ಚರ್ಚೆಯಾಗಲಿ: ಖಾಲಿದ್ ನಂದಾವರ
ಮಂಗಳೂರು : ಕರ್ನಾಟಕ ಅಲ್ಪ ಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷರು ಸದಾನಂದ ಗೌಡರು ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಸಲ್ಲಿಸಿದ್ದ ವಖಾಫ್ ಹಗರಣದ ವರದಿಯು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅವದಿಯಲ್ಲಿ ಉಭಯ ಸದನದಲ್ಲಿ ಮಂಡನೆಯಾಗಿ ಕಾನೂನು ಮಾನ್ಯತೆ ಪಡೆಯಿತಾದರೂ ಇದೀಗ ಅಲ್ಪಸಂಖ್ಯಾತರ ಪೂರ್ಣ ಮತವನ್ನು ಪಡೆದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಇನ್ನೂ ಈ ವರದಿಯನ್ನು ಸದನದಲ್ಲಿ ಚರ್ಚೆಗೆ ಕೈ ಗೆತ್ತಿ ಕೊಂಡಿಲ್ಲ .
ಇದು ರಾಜ್ಯದ ಜನತೆಗೆ ಮಾಡಿದ ಮಹಾ ದ್ರೋಹವಾಗಿದೆ ಎಂದು ಬಂಟವಾಳ ಬ್ಲಾಕ್ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಕಾರ್ಯದರ್ಶಿ ಹಾಗೂ ದಕ ಜಿಲ್ಲಾ ವಖಾಫ್ ಸಲಹಾ ಸಮಿತಿಯ ಸದಸ್ಯ ರಾದ ಖಾಲಿದ್ ನಂದಾವರ ಆರೋಪ ಮಾಡಿದ್ದು . ಈ ಬರುವ ಮುಂದಿನ ಅಧಿವೇಶನದಲ್ಲಿ ಈ ಕುರಿತು ಸ್ಪೀಕರ್ ಯು .ಟಿ ಖಾದರ್ ಹಾಗೂ ಸದನದ ಗಮನ ಸೆಳೆಯಬೇಕೆಂದು ಬಂಟವಾಳ ಬಿಜೆಪಿ ಅಲ್ಪ ಸಂಖ್ಯಾತ ಘಟಕ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ರವರಿಗೆ ಮನವಿ ನೀಡಿದ್ದಾರೆ .
ನಿಯೋಗದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮುಖಂಡರಾದ ಇಬ್ರಾಹಿಂ ನಂದಾವರ .ಅಶ್ರಫ್ ಮಾರಿ ಪಲ್ಲ ,ಅಮ್ಮಿ ನೆಹರು ನಗರ , ಮಮ್ಮಿ ಪಾಣೆ ಮಂಗಳೂರು ಮುಂತಾದವರು ಉಪಸ್ಥಿತರಿದ್ದರು . ಮನವಿಯನ್ನು ಸ್ವೀಕರಿದ ಶಾಸಕರು ಪಕ್ಷದ ಹಿರಿಯರಲ್ಲಿ ಚರ್ಚಿಸಿ ಈ ಬಗ್ಗೆ ಸದನದಲ್ಲಿ ಹಾಗೂ ಮುಖ್ಯಮಂತ್ರಿಗಳಲ್ಲಿ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಖಾಲಿದ್ ನಂದಾವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .