FILM
ರೇಣುಕಾಸ್ವಾಮಿಯಿಂದ ನನಗೆ ಯಾವುದೇ ಮೆಸೇಜ್ ಬಂದಿಲ್ಲ ಎಂದ ನಟಿ ಶುಭಾ ಪೂಂಜಾ
ಬೆಂಗಳೂರು ಸೆಪ್ಟೆಂಬರ್ 10: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ತನಿಖಾ ತಂಡಗಳು ಚಾರ್ಜ್ ಶೀಟ್ ಸಲ್ಲಿಸಿದೆ. ಇದರಲ್ಲಿ ರೇಣುಕಾ ಸ್ವಾಮಿ ಕನ್ನಡದ ಕೆಲವು ನಟಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಅದರಲ್ಲಿ ನಟಿ ಶುಭಾ ಪೂಂಜಾ ಮತ್ತು ರಾಗಿಣಿ ಅವರ ಹೆಸರು ಕೇಳಿ ಬಂದಿದೆ.
ಈ ಸುದ್ದಿ ವೈರಲ್ ಆದ ಬೆನ್ನಲ್ಲೇ ನಟಿಯರಾದ ರಾಗಿಣಿ ಮತ್ತು ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ. ನನ್ನ ಎಲ್ಲಾ ಮಾಧ್ಯಮ ಮಿತ್ರರೇ ಬೆಳಗ್ಗೆಯಿಂದ ರೇಣುಕಾಸ್ವಾಮಿ ಪ್ರಕರಣದ ಕುರಿತು ನನಗೆ ಕರೆ ಮಾಡುತ್ತಿದ್ದೀರಾ, ಅದಕ್ಕೆಲ್ಲಾ ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ. ನನ್ನ ವೈಯಕ್ತಿಕ ಖಾತೆಯಲ್ಲಿ ಅಂತಹ ಯಾವುದೇ ಮೆಸೇಜ್‌ಗಳು ಬಂದಿಲ್ಲ ಎಂದು ನಟಿ ಕ್ಲ್ಯಾರಿಟಿ ನೀಡಿದ್ದಾರೆ.
ನಟಿ ರಾಗಿಣಿ ಕೂಡ ನನ್ನ ಸೋಶಿಯಲ್ ಮಿಡಿಯಾ ವನ್ನು ಸಿಂಗಾಪುರದ ಕಂಪೆನಿಯೊಂದು ಹ್ಯಾಂಡಲ್ ಮಾಡುತ್ತಿದ್ದು, ಅಂತಹ ಮೆಸೇಜ್ ಗಳನ್ನು ಬಂದರೇ ನಾನು ನೋಡುವುದಿಲ್ಲ ಎಂದಿದ್ದಾರೆ.
You must be logged in to post a comment Login