Connect with us

KARNATAKA

ಅಶ್ವತ್ಥ ಎಲೆಯಲ್ಲಿ ಸಿಎಂ ಬಿಎಸ್ ವೈ ಚಿತ್ರ..ಅಕ್ಷಯ್ ಕೋಟ್ಯಾನ್ ಪ್ರತಿಭೆಗೆ ಸಿಎಂ ಬಿಎಸ್ ವೈ ಪ್ರಶಂಸೆ

ಬೆಂಗಳೂರು ಸೆಪ್ಟೆಂಬರ್ 27: ಅಶ್ವತ್ಥ ಎಲೆಯನ್ನು ಕಲಾತ್ಮಕವಾಗಿ ಕತ್ತರಿಸಿ ಚಿತ್ರ ರಚಿಸುವ ಕಲೆ ಇತ್ತೀಚೆನ ದಿನಗಳಲ್ಲಿ ಪ್ರಸಿದ್ಧಿ ಪಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಅಕ್ಷಯ್ ಕೋಟ್ಯಾನ್ ಕಲ್ಲಬೆಟ್ಟು ಅವರು ಈ ಕ್ಷೇತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಇತ್ತೀಚೆಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆ ಅವರ ಚಿತ್ರ ಬಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಅಕ್ಷಯ್ ಕೋಟ್ಯಾನ್ ಇದೀಗ ರಾಜ್ಯದ ಮುಖ್ಯಮಂತ್ರಿ ಬಿ ಎಸ್. ಯಡ್ಡಿಯೂರಪ್ಪರ ಚಿತ್ರವನ್ನು ಬಿಡಿಸುವ ಮೂಲಕ ಮತ್ತೊಮ್ಮೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.


ವೆಕ್ಟರ್ ಆರ್ಟ್ ಮಾದರಿಯಲ್ಲಿ ಸೂಕ್ಷ್ಮವಾಗಿ ಎಲೆಯನ್ನು ಕತ್ತರಿಸಿ ವ್ಯಕ್ತಿಯ ಮುಖದ ಚಿತ್ರ ರಚಿಸಲಾಗುತ್ತದೆ. ಬಳಿಕ ಅದರ ಹಿಂಭಾಗದಲ್ಲಿ ಹಸಿರು ಹೊರತಾದ ಬಣ್ಣದ ಕಾಗದ ಅಥವಾ ಆಕಾಶದ ಕಡೆಗೆ ಹಿಡಿದಾಗ ಚಿತ್ರ ಸ್ಪಷ್ಟವಾಗಿ ಕಾಣುತ್ತದೆ. ಇಂಥ ಚಿತ್ರ ರಚಿಸಲು ತಾಳ್ಮೆ ಅಗತ್ಯ. ಇನ್ನು ತಮ್ಮ ಲೀಫ್ ಆರ್ಟ್ ಚಿತ್ರವನ್ನು ಮೆಚ್ಚಿ ಹುಡುಗನ್ನು ಅಭಿನಂದಿಸಿದ ಸಿಎಂ ಬಿಎಸ್ ವೈ ಮುಂದಿನ ವಿದ್ಯಾಭ್ಯಾಸಕ್ಕಾಗಿ ಒಂದು ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಕೂಡ ನೀಡಿದ್ದಾರೆ.


ಈ ಸಮಯದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜೊತೆಗಿದ್ದರು. ಪ್ರಧಾನಿ ನರೇಂದ್ರ ಮೋದಿ ಇತರ ಗಣ್ಯ ವ್ಯಕ್ತಿಗಳ ಚಿತ್ರ ಬಿಡಿಸಿ ಮೆಚ್ಚುಗೆಗೆ ಪಾತ್ರವಾಗಿದ್ದರು.