Connect with us

LATEST NEWS

ಬಜಪೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ಸ್ಟಿಕ್ಕರ್ ಅಭಿಯಾನ….!!!

ಮಂಗಳೂರು ಸೆಪ್ಟೆಂಬರ್ 27: ಮಂಗಳೂರಿನಲ್ಲಿ ಮತ್ತೆ ಸರ್ಕಲ್ ನಾಮಕರಣ ವಿಷಯ ಸದ್ದು ಮಾಡುತ್ತಿದ್ದು, ಮಂಗಳೂರಿನ ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬೇಕೆಂಬ ಕೂಗು ಕೇಳಿ ಬಂದಿದ್ದು, ಇದಕ್ಕೆ ಪೂರಕವೆಂಬಂತೆ ಹಲವೆಡೆ ಅಭಿಯಾನಗಳು ನಡೆಯುತ್ತಿದೆ.


ಇಂದು ಮಂಗಳೂರಿನ ಬಜಪೆಯಲ್ಲಿ ಬಿರುವೆರ್ ಕುಡ್ಲ ಬಜಪೆ ಸಂಘಟನೆಯಿಂದ ಮಂಗಳೂರಿನ ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತ ಬೆಂಬಲಿಸಿ ಸ್ಟಿಕ್ಕರ್ ಅಭಿಯಾನ ಕೈಗೊಳ್ಳಲಾಯಿತು. ಬಸ್ಸು, ಕಾರು, ರಿಕ್ಷಾ ಇತ್ಯಾದಿ ವಾಹನಗಳಿಗೆ Sticker ಹಚ್ಚುವ ಮುಖಾಂತರ ಅಭಿಯಾನವನ್ನು ಬೆಂಬಲಿಸಲಾಯಿತು. ಇದಕ್ಕೆ ಬಸ್ಸು ಚಾಲಕ-ಮಾಲಕರು, ರಿಕ್ಷಾ ಚಾಲಕ-ಮಾಲಕರ ಸಂಘ, ಟ್ಯಾಕ್ಸಿ ಚಾಲಕ-ಮಾಲಕರ ಸಂಘ ಬಜಪೆ ಬೆಂಬಲವನ್ನು ಸೂಚಿಸಿದರು.


ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಅಧ್ಯಕ್ಷರು ಶ್ರೀ ಪ್ರಶಾಂತ್ ಕುಮಾರ್ ಕೆಂಜಾರು-ಕಾನ, ಬಿರುವೆರ್ ಕುಡ್ಲ ಸಂಘಟನೆ ಸಂಘಟನಾ ಅಧ್ಯಕ್ಷರು ಹಾಗೂ ಘಟಕದ ಉಪಾಧ್ಯಕ್ಷರು ಶ್ರೀ ಚಂದ್ರಶೇಖರ್ ಅಮೀನ್, ಕಾರ್ಯಾಧ್ಯಕ್ಷರು ಶ್ರೀ ಗಣೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸೂರಜ್ ಪೂಜಾರಿ ಎಕ್ಕಾರು, ಎಲ್ಲಾ ವಲಯದ ಸಂಚಾಲಕರು ಹಾಗೂ ಪದಾಧಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.

Facebook Comments

comments