ಬಾವಿ ಕುಸಿದು ಓರ್ವ ಕಾರ್ಮಿಕ ಸಾವು, ಮೂವರಿಗೆ ಗಾಯ

ಕುಂದಾಪುರ ಡಿಸೆಂಬರ್ 6: ಬಾವಿ ಕಾಮಗಾರಿ ವೇಳೆ ಬಾವಿ ಕುಸಿದು ಕಾರ್ಮಿಕನೋರ್ವ ಸಾವನಪ್ಪಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಮೃತ ಕಾರ್ಮಿಕನನ್ನು ಗೋಪಾಲ ಮೊಗವೀರ (32) ಎಂದು ಗುರುತಿಸಲಾಗಿದೆ. ಆಲೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಬಾವಿಯ ಕೆಲಸದಲ್ಲಿ ನಿರತರಾಗಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಬಾವಿ ಕಾಮಗಾರಿ ವೇಳೆ ಮಣ್ಣು ಕುಸಿದ್ದರಿಂದ ಕಲ್ಲು ಮಣ್ಣಿನಡಿಗೆ ಸಿಲುಕಿ ಸ್ಥಳದಲ್ಲೇ ಗೋಪಾಲ ಮೊಗವೀರ ಮೃತಪಟ್ಟಿದ್ದಾರೆ. ಇತರ ಮೂವರಿಗೆ ಗಾಯಗಳಾಗಿವೆ.

ಸತತ ಮೂರು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಣ್ಣಿನ ಅವಶೇಷಗಳಡಿ ಸಿಕ್ಕಿ ಬಿದ್ದಿದ್ದ ಕಾರ್ಮಿಕನ ಶವ ತೆಗೆಯಲಾಯಿತು. ಎರಡು ಇಟಾಚಿ, 2 ಜೆಸಿಬಿ ಮೂಲಕ ನಡೆದ ತೆರವು ಕಾರ್ಯಾಚರಣೆ ನಡೆಸಲಾಯಿತು, ಕಾರ್ಯಾಚರಣೆ ಸಂದರ್ಭ ಮತ್ತೆ ಬಾವಿ ಮಣ್ಣು ಇನ್ನಷ್ಟು ಕುಸಿದ ಕಾರಣ ಕಾರ್ಯಾಚರಣೆ ವಿಳಂಬವಾಗಿತ್ತು.

ಸತತ ಮೂರು ಗಂಟೆಗಳ ಸತತ ಕಾರ್ಯಾಚರಣೆ ಬಳಿ ಗೋಪಾಲ ಮೊಗವೀರ ಅವರ ಮೃತದೇಹವನ್ನು ಹೊರ ತೆಗೆಯಲಾಯಿತು.
ಗೋಪಾಲ ಮೊಗವೀರ ಅವರು ನಿನ್ನೆಯಷ್ಟೆ ಅಯ್ಯಪ್ಪ ಮಾಲೆ ಧರಿಸಿದ್ದರು. ಬಾವಿ ಕುಸಿತ ಸಂದರ್ಭ ಮಣ್ಣಿನಡಿ ಸಿಲುಕಿ ರಕ್ಷಣೆಗೊಳಪಟ್ಟ ಇತರ ಮೂವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಾಗಿದೆ.

Facebook Comments

comments