ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಅಂದೋಲನ ವಿಜಯೋತ್ಸವ

ಪುತ್ತೂರು ಡಿಸೆಂಬರ್ 6: ಹಿಂದೂ ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಇಂದು ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಅಂದೋಲನದ ವಿಜಯೋತ್ಸವ ಅಂಗವಾಗಿ ಬಿ ಸಿ ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದ ವಠಾರದ ಲ್ಲಿ ಸತ್ಯನಾರಾಯಣ ಪೂಜೆ ಸಭಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮ ದಲ್ಲಿ ಕರ್ನಾಟಕ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ , ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಹಿಂದೂ ಸಮಾಜ ಉನ್ನತ ಮಟ್ಟದಲ್ಲಿ ಬೆಳೆಯುವ ಸಂಧರ್ಭದಲ್ಲಿ ನಮ್ಮ ಜವಬ್ದಾರಿ ಯನ್ನು ಮರೆಯದೆ ಹಿಂದೂ ಧರ್ಮದ ಶ್ರೇಯಸ್ಸಿಗಾಗಿ, ಜಾಗ್ರತಿಗಾಗಿ ಕಾರ್ಯಪ್ರವ್ರತ್ತರಾಗೋಣ ಎಂದರು.

ಬಹು ಸಂಖ್ಯಾತ ಎಂಬ ಹೆಸರಿನಲ್ಲಿ ಹಿಂದೂ ಸಮುದಾಯವನ್ನು ಧಮನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ, ಇದರ ವಿರುದ್ದ ಹಿಂದೂ ಸಮಾಜ ಸೆಟೆದುನಿಂತು ಹೋರಾಟ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅವರು ಹೇಳಿದರು.

3 Shares

Facebook Comments

comments