Connect with us

    LATEST NEWS

    ಊಟಿ – ಕಟ್ಟಡ ಕುಸಿದು 6 ಮಂದಿ ಮಹಿಳೆಯರು ಜೀವಂತ ಸಮಾಧಿ

    ಊಟಿ ಫೆಬ್ರವರಿ 07: ನಿರ್ಮಾಣ ಹಂತದ ಕಟ್ಟಡದ ಬದಿಯಲ್ಲಿರುವ ಮನೆಯೊಂದು ಕುಸಿದ ಪರಿಣಾಮ 6 ಮಹಿಳೆಯರು ಜೀವಂತ ಸಮಾಧಿಯಾದ ಘಟನೆ ಊಟಿ ಸಮೀಪದ ಗಾಂಧಿನಗರದಲ್ಲಿ ನಡೆದಿದೆ.


    ಮೃತರನ್ನು ಶಕೀಲಾ (30), ಸಂಗಿತಾ (35), ಭಾಗ್ಯಾ (36), ಉಮಾ (35), ಮುತ್ತುಲಕ್ಷ್ಮಿ (36) ಹಾಗೂ ರಾಧಾ (38) ಮೃತರು ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆ ಇದೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಾರ್ಮಿಕರು ಎಂದಿನಂತೆ ತಾವು ಕಾರ್ಯ ನಿರ್ವಹಿಸುವ ನಿವೇಶನದಲ್ಲಿ ಮಣ್ಣನ್ನು ತೆಗೆದು, ಸಾಗಿಸುತ್ತಿದ್ದರು. ಆದರೆ ಇದೇ ಸಂದರ್ಭದಲ್ಲಿ ಪಕ್ಕದಲ್ಲಿದ್ದ ಮನೆಯೊಂದು ಏಕಾಏಕಿ ಕುಸಿದಿದೆ. ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದರು ಎಂದು ಪೊಲೀಸರು ತಿಳಿಸಿದ್ದಾರೆ.


    ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಾರ್ವಜನಿಕರು ತಕ್ಷಣ ಕಾರ್ಯಪ್ರವೃತ್ತರಾಗಿ, ಸಿಲುಕಿದವರನ್ನು ಹೊರಕ್ಕೆ ತೆಗೆಯುವ ಪ್ರಕ್ರಿಯೆ ನಡೆಸಿದರು. ಗಾಯಾಳುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply