Connect with us

    DAKSHINA KANNADA

    ಪುತ್ತಿಲ ಪರಿವಾರ ಬಿಜೆಪಿಗೆ ನೀಡಿದ್ದ ಗಡುವಿಗೆ ದಿನ ಒಂದೇ ಬಾಕಿ, ಕುತೂಹಲ ಮೂಡಿಸಿದೆ ಪುತ್ತೂರಿನ ಪುತ್ತಿಲ -ಬಿಜೆಪಿ ರಾಜಕೀಯ ನಡೆ..!

    ಪುತ್ತೂರು : ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ಜೊತೆ ಪುತ್ತಿಲ ಪರಿವಾರ ವಿಲೀನ ಪ್ರಕ್ರಿಯೆಗೆ ಪುತ್ತಿಲ ಪರಿವಾರ ನೀಡಿದ್ದ ಮೂರು ದಿನಗಳ ಗಡುವಿನಲ್ಲಿ 2 ದಿನಗಳು ಮುಗಿದಿದ್ದು ಇನ್ನೊಂದೆ ದಿನ ಬಾಕಿ ಇದೆ.

    ಮೂರು ದಿನದಲ್ಲಿ ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿಯಲ್ಲಿ ಅಪೇಕ್ಷಿಸಿದ ಹುದ್ದೆ ನೀಡಲು ಪುತ್ತೂರಿನಲ್ಲಿ ನಡೆದಿದ್ದ ಪುತ್ತಿಲ ಪರಿವಾರದ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದ್ರೆ ಪುತ್ತಿಲ ಪರಿವಾರದ ಗಡುವಿಗೆ ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಅತಂತ್ರವಾಗಿದ್ದರೂ ಬಿಜೆಪಿ ನಡೆ ಕುತೂಹಲಕ್ಕೆ ಕಾರಣವಾಗಿದೆ. ಹಿಂದುತ್ವದ ಶಕ್ತಿ ಕೇಂದ್ರವಾಗಿರುವ ಪುತ್ತೂರು ಬಿಜೆಪಿ ಪಕ್ಷಕ್ಕೆ ಎಲ್ಲಾ ಚುನಾವಣೆಯಲ್ಲಿ ಶಕ್ತಿ ನೀಡುತ್ತಾ ಬಂದಿದೆ. ಆದ್ರೆ ಕಳೆದ ವಿಧಾನ ಸಭಾ ಚುನಾವಣೆ ಬಳಿಕ ಪುತ್ತಿಲ ಪರಿವಾರದಿಂದ ಬಿಜೆಪಿಗೆ ಭಾರಿ ಪ್ರಮಾಣದಲ್ಲಿ ಡ್ಯಾಮೇಜ್ ಆಗಿದೆ.

    ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಹಿಂದುತ್ವದ ಮುಖಂಡ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಪುತ್ತಿಲ ಪರಿವಾರ ನಿರಂತರ ಬಿಜೆಪಿಗೆ ಆಘಾತ ನೀಡುತ್ತಲೇ ಬಂದಿದೆ. ಇದೇ ಕಾರಣಕ್ಕೆ ಲೋಕಾಸಭಾ ಚುನಾವಣಾ ಸಂದರ್ಭ ಇದು ಮರುಕಳಿಸದಂತೆ ಪುತ್ತಿಲ ಪರಿವಾರವನ್ನು ಶರ್ತಗಳೊಂದಿಗೆ ಬಿಜೆಪಿಗೆ ವಿಲೀನಗೊಳಿಸಲು ತಯಾರಿ ನಡೆಸಲಾಗಿತ್ತು. ಆದ್ರೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಬಿಜೆಪಿಯ ಕೆಲವು ನಾಯಕರ ವಿರೋಧ ವ್ಯಕ್ತವಾಗಿತ್ತು. ಇದೇ ವೈಮನಸ್ಸು ಬೆಳೆದು ಕಳೆದ ಎಳೆಂಟು ತಿಂಗಳು ಕಳೆದರೂ ಒಮ್ಮತ ಮೂಡದೆ ಹಾಗಯೇ ಉಳಿದಿತ್ತು. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಬಿಜೆಪಿ ಎಚ್ಚರಿಕೆಯ ನಡೆ ಪ್ರದರ್ಶಿಸುತ್ತಿದೆ ಎನ್ನಲಾಗಿದೆ.

    ಒಂದು ವೇಳೆ ಅರುಣ್ ಕುಮಾರ್ ಪುತ್ತಿಲರಿಗೆ ಹುದ್ದೆ ನೀಡದೇ ಹೋದಲ್ಲಿ ಬಂಡಾಯ ಸ್ಪರ್ಧೆ ಎದುರಿಸಬೇಕಾದ ಅನಿವಾರ್ಯತೆ ಬಂದೊಗಲಿದೆ. ಇನ್ನೊಂದೆಡೆ ಗಡುವಿಗೆ‌ ಹೆದರಿ‌ ಹುದ್ದೆ ನೀಡಿದಲ್ಲಿ ಇಂಥಹುದೇ ಪ್ರಕರಣ ದೇಶದೆಲ್ಲೆಡೆ ಬಿಜೆಪಿಗೆ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಗಳಿವೆ. ವಿಶೇಷ ಅಂದ್ರೆ ಮೋದಿ‌ ಹಾಗು‌ ಹಿಂದುತ್ವವನ್ನು‌ ಪುತ್ತಿಲ ಪರಿವಾರ ಮತ್ತು ಬಿಜೆಪಿ ನೆಚ್ಚಿಕೊಂಡಿರುವುದೇ ಕಾರಣವಾಗಿದ್ದು ಎರಡೂ ಸಂಘಟನೆಗಳೂ ಒಂದೇ ರೀತಿಯ ವೈಚಾರಿಕತೆಯನ್ನು ಹೊಂದಿದೆ. ಇತ್ತೀಚಿನ ಬೆಳವಣಿಗೆಯಲ್ಲಿದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳಿಗೆ ಅಧ್ಯಕ್ಷರ ಆಯ್ಕೆ ಮಾಡಿರುವ ಬಿಜೆಪಿ ಪುತ್ತೂರು ಘಟಕದ ಅಧ್ಯಕ್ಷ ಮತ್ತು ಒಂದು ಜಿಲ್ಲಾ ಉಪಾಧ್ಯಕ್ಷ ಸ್ಥಾನ ಬಾಕಿ ಉಳಿಸಿಕೊಂಡಿದೆ. ಈ ಮೂಲಕ ಅರುಣ್ ಪುತ್ತಿಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧ ಎನ್ನುವ ಸಂದೇಶ ಪುತ್ತಿಲ ಪರಿವಾರದ ಕಾರ್ಯಕರ್ತರಿಗೆ ಬಿಜೆಪಿ ನೀಡಿದೆ. ಇದರ ಜೊತೆ ಜೊತೆಗೆನೇ ಪುತ್ತಿಲ ಪರಿವಾರದ ಮುಖಂಡರ ಗಡುವಿಗೆ ಡೋಂಟ್ ಕೇರ್ ಅನ್ನುವ ಸಂದೇಶವನ್ನೂ ರವಾನಿಸಿದೆ. ಒಟ್ಟಾರೆಯಾಗಿ ಗುರುವಾರ ಸಂಜೆ ಒಳಗೆ ಒಂದು ಅಂತಿಮ ನಿರ್ಧಾರ 2 ಕಡೆಗಳಿಂದಲೂ ಬರುವ ಸಾಧ್ಯತೆಗಳಿದ್ದು ಕಾದು ನೋಡಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply