Connect with us

    LATEST NEWS

    ಕುವೈತ್ ನ ಅಮೀರ್ ಶೇಖ್ ಸಬಾಹ್ ಅಮೇರಿಕದಲ್ಲಿ ನಿಧನ

    ಹೊಸದಿಲ್ಲಿ: ಕುವೈತ್ ನ ಅಮೀರ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ (91) ಅಮೆರಿಕದ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ.


    1929ರಲ್ಲಿ ಜನಿಸಿದ ಸಬಾಹ್ ಅಲ್ ಅಹ್ಮದ್ ಅವರು ಆಧುನಿಕ ಕುವೈತ್ ನ ವಿದೇಶಾಂಗ ನೀತಿಯ ವಾಸ್ತುಶಿಲ್ಪಿ ಎಂದೇ ಪ್ರಸಿದ್ಧರಾದವರು. 1963ರಿಂದ 2003ರವರೆಗೆ ಸುಮಾರು 40 ವರ್ಷಗಳ ಕಾಲ ಅವರು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದರು.
    ಶೇಖ್ ಜಾಬಿರ್ ಅಲ್ ಸಬಾಹ್ ಅವರ ನಿಧನದ ನಂತರ 2006ರ ಜನವರಿಯಲ್ಲಿ ಅವರು ಕುವೈತ್ ನ ಅಮೀರ್ ಆಗಿ ಅಧಿಕಾರಿ ವಹಿಸಿಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply