Connect with us

    LATEST NEWS

    ಕುಂದಾಪುರ – ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕ ಮುಹಮ್ಮದ್ ಅರೀಝ್ ಸಾವು

    ಉಡುಪಿ‌ ಎಪ್ರಿಲ್ 12 : ರೆಸಾರ್ಟ್ ವೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕನೊಬ್ಬ ಸಾವನಪ್ಪಿದ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್‌ನಲ್ಲಿ ನಡೆದಿದೆ. ಮೃತ ಬಾಲಕನನ್ನು ಹೊಡೆ ಮೂಲದ ಮುಹಮ್ಮದ್ ಅರೀಝ್ (10) ಎಂದು ಗುರುತಿಸಲಾಗಿದೆ.


    ರೆಸಾರ್ಟ್ ವೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಬಾಲಕನೊಬ್ಬ ಸಾವನಪ್ಪಿದ ಘಟನೆ ಉಡುಪಿಯ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್‌ನಲ್ಲಿ ನಡೆದಿದೆ.


    ಹೂಡೆಯ ಮೊಹಮ್ಮದ್‌ ಅಝೀಝ್‌ (10) ಮೃತ ಬಾಲಕ. ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಹತ್ತಾರು ಜನ ಇದ್ದರೂ ಕೂಡ ಸಾವಿನಿಂದ ಪಾರಾಗಲು ಸಾಧ್ಯವಾಗಿಲ್ಲ. ಹೌದು, ಬಾಲಕ ಮುಳುಗುತ್ತಿದ್ದರೂ ಹತ್ತಿರದಲ್ಲಿದ್ದ ಯಾರೊಬ್ಬರಿಗೂ ಗೊತ್ತಾಗಿರಲಿಲ್ಲ. ಇನ್ನು ಈದ್‌ ಹಬ್ಬದ ರಜೆ ಪ್ರಯುಕ್ತ ಕುಟುಂಬದ ಜೊತೆಗೆ ಅಝೀಝ್‌ ತೆರಳಿದ್ದ. ಅಝೀಝ್‌ ಕೊನೆಯ ಕ್ಷಣದ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರೆಸಾರ್ಟ್ ಸ್ವಿಮ್ಮಿಂಗ್ ಪೂಲ್ ನೀರಿಗೆ ಇಳಿದ ಮುಹಮ್ಮದ್‌ ಹೊರಬರಲು ಆಗದೆ ಒದ್ದಾಡಿದ್ದಾನೆ. ವಿಪರ್ಯಾಸವೆಂದರೇ ಅದೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಹತ್ತಕ್ಕೂ ಅಧಿಕ ಮಂದಿ ಆಟ ಆಡುತ್ತಿದ್ದರೂ ಕೂಡ ಯಾರಿಗೂ ಬಾಲಕ ಸಾವು ಬದುಕಿನ ನಡುವೆ ಹೋರಾಡುತ್ತಿರುವುದು ಕಾಣಿಸಲಿಲ್ಲ. ಯುವಕನೊಬ್ಬ ಅದೇ ಜಾಗದಲ್ಲಿ ಬಾಲಕ ಒದ್ದಾಡುತ್ತಿರುವುದನ್ನು ನೋಡಿದ್ದಾನೆ. ಆದರೆ ಏನೂ ಮಾಡದೇ ಮುಂದೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್ ವಿರುದ್ಧ ಪೋಷಕರು ದೂರು ದಾಖಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply