Connect with us

    KARNATAKA

    ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ : ಕೊನೆಗೂ ಪ್ರಮುಖ ಉಗ್ರರ ಬಂಧಿಸಿದ NIA..! ಪರಮೇಶ್ವರ್ ಶ್ಲಾಘನೆ..

    ಬೆಂಗಳೂರು : ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಮತ್ತಿಬ್ಬರು ಉಗ್ರರನ್ನು ಎನ್‌ಐಎ ಬಂಧಿಸಿದೆ.

     

    ಪ್ರಮುಖ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ಪಶ್ಚಿಮ ಬಂಗಾಳದಲ್ಲಿ ಎನ್‌ಐಎ ಬಂಧಿಸಿದೆ. ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್‌ ಪತ್ತೆಗೆ ಆತ ಧರಿಸಿದ್ದ ಕ್ಯಾಪ್‌ನ ಸಹಾಯದಿಂದ ಕಾರ್ಯಾಚಣೆ ನಡೆಸಲಾಗಿತ್ತು. ಮತೀನ್ ತಾಹಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮುಸ್ಸಾವಿರ್ ಹುಸೇನ್ ಶಾಜಿಬ್​ನದ್ದೇ ಕೃತ್ಯ ಎಂಬುದು ದೃಢಪಟ್ಟಿತ್ತು. ನಂತರ ಆತನ ಪತ್ತೆಗೆ ಬಲೆಬೀಸಲಾಗಿತ್ತು. ಶಂಕಿತ ಭಯೋತ್ಪಾದಕ ಕರ್ನಾಟಕ ಮೂಲದವನಾಗಿದ್ದು, ಮಲೆನಾಡು ಪ್ರದೇಶದಲ್ಲಿ ಉಗ್ರಗಾಮಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿತ್ತು. ಮುಸಾಫೀರ್ ಶಾಜೀನ್ ಹುಸೇನ್​ನನ್ನು ಉತ್ತರ ಭಾರತದ ರಾಜ್ಯದಲ್ಲಿ ಅರೆಸ್ಟ್ ಮಾಡಲಾಗಿದೆ. ಎನ್ ಐಎ ತಂಡದಿಂದ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.ಮುಸಾಫೀರ್ ಶಾಜೀನ್ ಹುಸೇನ್​ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಕಡೆ ತಲೆಮರೆಸಿಕೊಂಡಿದ್ದನು. ಕೊನೆಗೂ ಆತನನ್ನು ಎನ್​ಐಎ ತಂಡ ಬಂಧಿಸಿದೆ.

    ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟಿದ್ದ ಬಾಂಬರ್‌ ಬಳಿಕ ತಲೆಮರೆಸಿಕೊಂಡಿದ್ದ ತುಮಕೂರು, ಬಳ್ಳಾರಿ, ಬೀದರ್‌ ಮೂಲಕ ರಾಜ್ಯದಿಂದ ಪರಾರಿಯಾಗಿದ್ದ ಮುಸಾವೀರ್‌ ಹುಸೇನ್‌ ಶಜೀಬ್‌ ಆಂಧ್ರ ಪ್ರದೇಶದ ಮೂಲಕ ಪಶ್ಚಿಮ ಬಂಗಾಳಕ್ಕೆ ತೆರಳಿದ್ದ ಎನ್ನಲಾಗಿದೆ. ಅಲ್ಲಿಂದ ಬಾಂಗ್ಲಾದೇಶಕ್ಕೆ ಪರಾರಿಯಾಗುವ ಯೋಚನೆಯಲ್ಲಿ ಅಬ್ದುಲ್‌ ಮತೀನ್‌ ತಹಾ ಹಾಗೂ ಮುಸಾವೀರ್‌ ಶಜೀಬ್‌ ಇದ್ದರು ಎನ್ನಲಾಗಿದೆ. ಪಶ್ಚಿಮ ಬಂಗಾಳದ ಪಕ್ಕವೇ ಬಾಂಗ್ಲಾದೇಶ ಇರುವುದರಿಂದ ಅಲ್ಲಿಂದ ಬೇರೆ ಕಡೆ ತಲೆಮರೆಸಿಕೊಳ್ಳುವ ಯೋಚನೆಯಲ್ಲಿ ಶಂಕಿತರು ಇದ್ದರು ಎಂದು ಹೇಳಲಾಗಿದೆ. ಆದರೆ, ಪಶ್ಚಿಮ ಬಂಗಾಳಕ್ಕೆ ಉಗ್ರರು ಎಂಟ್ರಿ ಕೊಟ್ಟ 2 ಗಂಟೆಯಲ್ಲೇ ಅವರನ್ನು ಅಲ್ಲಿನ ಪೊಲೀಸರ ಸಹಕಾರದಿಂದ ಬೇಟೆಯಾಡಲಾಗಿದೆ.

    ಎನ್ಐಎಯನ್ನು ಶ್ಲಾಘಿಸಿದ ಸಚಿವ ಪರಮೇಶ್ವರ್ :

    ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಗಳ ಬಂಧನದ ಹಿನ್ನೆಲೆಯಲ್ಲಿ ಎನ್‌ಐಎ ಹಾಗೂ ರಾಜ್ಯ ಪೊಲೀಸರಿಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅಭಿನಂದನೆ ಸಲ್ಲಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ಫೆ.29 ರಂದು ಬಾಂಬ್ ಬ್ಲಾಸ್ಟ್ ಆಗಿದ್ದು ಇಡೀ ವಿಶ್ವ ನೋಡಿದೆ. ಅವತ್ತಿನಿಂದಲೇ ನಮಗೆ ಸಿಕ್ಕ ಫೂಟೇಜ್, ಬೇರೆ ಬೇರೆ ರೀತಿಯಲ್ಲಿ ಸಿಕ್ಕ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ಮಾಡಿ ತನಿಖೆ ನಡೆಸಲಾಗಿದೆ ಎಂದರು. ಘಟನೆಯ ತನಿಖೆ ಮಾಡಿದ ಸಂದರ್ಭದಲ್ಲಿ ಎನ್ಐಎ ತಂಡವೂ ಭಾಗಿಯಾಗಿ ಕೇಸ್ ಅವರೇ ಮುಂದುವರಿಸಿದ್ದಾರೆ. ನಮ್ಮ ಪೊಲೀಸರ ಜೊತೆಗೆ ಅವರು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲನೆ ಮಾಡಿ ತನಿಖೆ ನಡೆಸಿದ್ದಾರೆ. ಅನೇಕ ಮಾಹಿತಿ ಆಧರಿಸಿ ಅನುಮಾನ ವ್ಯಕ್ತವಾಗಿತ್ತು. ಶಿವಮೊಗ್ಗ ಬ್ಲಾಸ್ಟ್ ಸಂಬಂಧಿಸಿ ಅನುಮಾನ ಪತ್ತೆ ಹಚ್ಚಿದಾಗ ವ್ಯಕ್ತಿಗಳು ತೀರ್ಥ ಹಳ್ಳಿಯವರು ಎಂಬ ಮಾಹಿತಿ ಸಿಕ್ಕಿತ್ತು ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply