Connect with us

LATEST NEWS

ಕುಂದಾಪುರ ಅರಣ್ಯ ಇಲಾಖೆಯ ಸಿಬಂದಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ..!

ಕುಂದಾಪುರ : ಕುಂದಾಪುರ ಅರಣ್ಯ ಇಲಾಖೆಯ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುವ ಚಾಲಕರೊಬ್ಬರ ಮೇಲೆ ನಾಲ್ವರು ಹಲ್ಲೆ ನಡೆಸಿದ ಘಟನೆ ನಡೆದಿದೆ.

 

ಕುಂದಾಪುರದ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು ಹಲ್ಲೆಗೊಳಗಾದ ಚಾಲಕ ಕುಂದಾಪುರದ ಕುಂದೇಶ್ವರದ ನಿವಾಸಿ ಅಶೋಕ್ (38) ಆಸ್ಪತ್ರೆಗೆ ದಾಖಲಾಗಿದ್ದಾನೆ.

ಬುಧವಾರ ಸಂಜೆ ವೇಳೆಗೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದೊಳಕ್ಕೆ ಬಂದ ಆರೋಪಿಗಳಾದ ಇಮ್ತಿಯಾಝ್, ವಿನೋದ್ ಹಾಗೂ ಮತ್ತಿಬ್ಬರು ಆರೋಪಿಗಳು ಅಶೋಕ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆನ್ನಲಾಗಿದೆ.

ಅಕ್ರಮ ಮರ ಸಾಗಾಟದ ವಾಹನವೊಂದನ್ನು ಅರಣ್ಯ ಇಲಾಖಾಧಿಕಾರಿ ಗಳು ವಶಕ್ಕೆ ಪಡೆದು ಬುಧವಾರ ಪ್ರಕರಣ ದಾಖಲಿಸಿದ್ದರು.

ಈ ಮಾಹಿತಿ ಯನ್ನು ಇಲಾಖೆಗೆ ಚಾಲಕ ಅಶೋಕ್ ನೀಡಿದ್ದಾಗಿ ಭಾವಿಸಿದ್ದ ಆರೋಪಿಗಳು ಈ ಹಲ್ಲೆ ನಡಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಗಾಯಾಳು ಅಶೋಕ್ ಅವರನ್ನು ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ಕುಂದಾಪುರ ವಲಯ ಅರಣ್ಯಾಧಿಕಾರಿ ಟಿ. ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿಗಳಾದ ಬಿ. ಉದಯ್, ಗುರುರಾಜ್, ಶರತ್, ದಿಲೀಪ್, ಸುನೀಲ್, ಪ್ರಥಮ ದರ್ಜೆ ಸಹಾಯಕ ಸತೀಶ್, ಕಚೇರಿ ಸಿಬ್ಬಂದಿ ಅಣ್ಣಪ್ಪ, ಗಸ್ತು ಅರಣ್ಯ ಪಾಲಕರಾದ ಆನಂದ ಬಳೆಗಾರ, ಉದಯ್ ಕುಮಾರ್, ಬಸವರಾಜ್, ರಾಮಪ್ಪ, ಅರಣ್ಯ ವೀಕ್ಷಕ ಸೋಮಶೇಖರ್, ಚಾಲಕ ಸತೀಶ್ ಕುಲಾಲ್ ಭೇಟಿ ನೀಡಿದ್ದಾರೆ.

ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share Information
Advertisement
Click to comment

You must be logged in to post a comment Login

Leave a Reply