Connect with us

LATEST NEWS

ಮದ್ಯಮುಕ್ತ ಗ್ರಾಮದಲ್ಲಿ ಅಕ್ರಮ ಮದ್ಯ

ಮಂಗಳೂರು ಅಗಸ್ಟ್ 20: ಮದ್ಯಮುಕ್ತ ಗ್ರಾಮವಾಗಿ ಘೋಷಿಸಲ್ಪಟ್ಟಿದ್ದ ಸುಬ್ರಹ್ಮಣ್ಯದಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ .
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಬಳಿ ಇರುವ ಪ್ರಶಾಂತ್ ಮಹಲ್ ಹೋಟೆಲ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವ ಮಾಹಿತಿ ಪಡೆದ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ .
ದಾಳಿ ಸಂದರ್ಭದಲ್ಲಿ ಪ್ರಶಾಂತ್ ಮಹಲ್ ಹೋಟೆಲ್ ನಲ್ಲಿ ಸುಮಾರು ನಲವತ್ತೈದು ಮದ್ಯದ ಬಾಟಲಿ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಇತ್ತೀಚೆಗಷ್ಟೇ ಮದ್ಯಮುಕ್ತ ಗ್ರಾಮವಾಗಿ ಘೋಷಿಸಲ್ಪಟ್ಟಿತ್ತು. ಈ ನಡುವೆ ಅಕ್ರಮ ಮಧ್ಯ ಮಾರಾಟ ಪ್ರಕರಣ ನಡೆದಿರುವುದು ಪರಿಸರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *