Connect with us

FILM

‘ಕೆಜಿಎಫ್’ ಖ್ಯಾತಿಯ ಕೃಷ್ಣ ಜಿ ರಾವ್ ಇನ್ನಿಲ್ಲ

ಬೆಂಗಳೂರು, ಡಿಸೆಂಬರ್ 07: ಕೆಜಿಎಫ್ ಸಿನಿಮಾದಲ್ಲಿ ಪುಟ್ಟ ಪಾತ್ರವಾದರೂ, ಜನರು ಗುರುತಿಸುವಂತಹ ನಟನೆ ಮಾಡಿದ್ದ ಕೃಷ್ಣ ಜಿ ರಾವ್ ನಿಧನರಾಗಿದ್ದಾರೆ. ಉಸಿರಾಟದ ತೊಂದರೆ ಕಾರಣದಿಂದಾಗಿ ಮೊನ್ನೆಯಷ್ಟೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ತೀವ್ರ ಉಸಿರಾಟದ ತೊಂದರೆಯಿಂದಾಗಿ ಐದು ದಿನಗಳ ಹಿಂದೆಯಷ್ಟೇ ಅವರನ್ನು ಬೆಂಗಳೂರಿನ ಸೀತಾ ಸರ್ಕಲ್ ಬಳಿ ಇರುವ ವಿನಾಯಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐದು ದಿನಗಳಿಂದ ವೈದ್ಯರು ಕೂಡ ಸತತ ಪ್ರಯತ್ನದಲ್ಲಿದ್ದರು. ಇಂದು ಚಿಕಿತ್ಸೆ ಫಲಿಸದೇ ಕೃಷ್ಣ ಅವರು ಬಾರದ ಲೋಕಕ್ಕೆ ಹೋಗಿದ್ದಾರೆ.

ಕೃಷ್ಣ ಜಿ ರಾವ್ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರೂ, ಕೆಜಿಎಫ್ ತಾತಾ ಎಂದೇ ಫೇಮಸ್ ಆಗಿದ್ದರು. ಶಂಕರ್ ನಾಗ್ ಕಾಲದಿಂದಲೂ ಇವರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವಾರು ಚಿತ್ರಗಳಲ್ಲಿ ಇವರು ನಟಿಸಿದ್ದರೂ, ಜನರು ಗುರುತಿಸುವಂತೆ ಮಾಡಿದ್ದು ಕೆಜಿಎಫ್ ಎನ್ನುವುದು ವಿಶೇಷ. ಈ ಸಿನಿಮಾದ ನಂತರ ಅವರು ಅನೇಕ ಸಿನಿಮಾಗಳನ್ನು ಒಪ್ಪಿಕೊಂಡಿದ್ದರು. ಇವರ ಮುಖ್ಯ ಭೂಮಿಕೆಯ ಸಿನಿಮಾವೊಂದು ಬಿಡುಗಡೆಗೂ ಸಿದ್ಧವಾಗಿದೆ.

Advertisement
Click to comment

You must be logged in to post a comment Login

Leave a Reply