Connect with us

DAKSHINA KANNADA

ಪುತ್ತೂರು: ಬರ್ತ್ ಡೇ ಪಾರ್ಟಿ ವಿವಾದ, ಪಾರ್ಟಿಯಲ್ಲಿ ಭಾಗವಹಿಸಿದ ಹುಡುಗಿಯರಿಂದ ದೂರು

ಪುತ್ತೂರು, ಡಿಸೆಂಬರ್ 07: ಪುತ್ತೂರು ರೈಲು ನಿಲ್ದಾಣದಲ್ಲಿ ನಡೆದಿದ್ದ ಬರ್ತ್ ಡೇ ಪಾರ್ಟಿ ವಿವಾದಕ್ಕೆ ಕಾರಣವಾಗಿದ್ದು, ಖಾಸಗಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಬರ್ತ್ ಡೇ ಪಾರ್ಟಿ ಮಾಡಿದ ವಿಡಿಯೋ ವೈರಲ್ ಆಗಿದೆ.

ಪುತ್ತೂರು ರೈಲು ನಿಲ್ದಾಣದಲ್ಲಿ ಖಾಸಗಿ ನರ್ಸಿಂಗ್ ಕಾಲೇಜಿನ ಹಿಂದೂ ಹುಡುಗಿಯರು ಹಾಗು ಮುಸ್ಲಿಂ ಹುಡುಗರು ಪುತ್ತೂರು ರೈಲು ನಿಲ್ದಾಣದಲ್ಲಿ ಬರ್ತ್ ಡೇ ಪಾರ್ಟಿ  ಮಾಡಿದ್ದಾರೆ. ಪಾರ್ಟಿ ಸಂದರ್ಭ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹುಡುಗರು ವೈರಲ್ ಮಾಡಿದ್ದಾರೆ.

ಹಿಂದೂ ಸಂಘಟನೆಗಳು ಪಾರ್ಟಿ ವಿಡಿಯೋ ನೋಡಿ ಆಕ್ರೋಶ ವ್ಯಕ್ತಪಡಿಸಿದ್ದು, ಇದೀಗ ಪಾರ್ಟಿಯಲ್ಲಿ ಭಾಗವಹಿಸಿದ ಹುಡುಗಿಯರು ತಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಸಹಪಾಠಿಗಳ ವಿರುದ್ಧವೇ ದೂರು ನೀಡಿದ್ದಾರೆ.

Advertisement
Click to comment

You must be logged in to post a comment Login

Leave a Reply