Connect with us

    KARNATAKA

    ಕೋಟೇಶ್ವರ-ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಐಸಿವೈಎಂ ಅಧ್ಯಕ್ಷ ಜೋಯಿಸ್ಟನ್ ಕ್ಯಾಸ್ಟಲಿನೋ ಸಾವು

    ಕೋಟೇಶ್ವರ ಡಿಸೆಂಬರ್ 21:ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.


    ಉದ್ಯಾವರದ ಸಂಪಿಗೆ ನಗರದ ನಿವಾಸಿ ರಾಬರ್ಟ್ ಕ್ಯಾಸ್ಟಲಿನೋ ಎಂಬವರ ಪುತ್ರ ಜೋಯಿಸ್ಟನ್ ಕ್ಯಾಸ್ಟಲಿನೋ(22) ಮೃತಪಟ್ಟವರು. ಇವರು ಉದ್ಯಾವರದ ಐಸಿವೈಎಂ ಅಧ್ಯಕ್ಷರಾಗಿದ್ದರು. ಕಾರಿನಲ್ಲಿದ್ದ ಲ್ಯಾಸ್ಟನ್ ಪಿಂಟೋ (22), ಜಸ್ಟಿನ್ ಕರ್ಡೊಜ (22), ವಿಲ್ಸನ್ ಮಾರ್ಟಿನ್ (23), ಗ್ಲಾಡ್ಸನ್ ಡಿಸಿಲ್ವಾ (23) ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲ ಉದ್ಯಾವರದ ವೈಸಿಎಂ ಘಟಕದ ಸದಸ್ಯರೆಂದು ತಿಳಿದು ಬಂದಿದೆ. ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply