LATEST NEWS
ಕರಾವಳಿ ದೈವಾರಾಧನೆ ಈಗ ಬೆಂಗಳೂರಿಗೆ ಶಿಫ್ಟ್- ಕೊರಗಜ್ಜನ ಹೆಸರಲ್ಲಿ ಹಣ ವಸೂಲಿ ದಂಧೆ?
ಮಂಗಳೂರು ನವೆಂಬರ್ 25: ಕಾಂತಾರ ಸಿನೆಮಾ ಸಕ್ಸಸ್ ಬೆನ್ನಲ್ಲೆ ಇದೀಗ ಕರಾವಳಿಯ ದೈವಾರಾಧನೆ ಇಡೀ ವಿಶ್ವಕ್ಕೆ ತಿಳಿದಿದ್ದು, ಇದರ ಬೆನ್ನಲ್ಲೇ ಇದೀಗ ಕರಾವಳಿಗೆ ಮಾತ್ರ ಸೀಮಿತವಾಗಿದ್ದ ದೈವಸ್ಥಾನಗಳು ಹೊರ ಜಿಲ್ಲೆಗಳಲ್ಲೂ ಪ್ರಾರಂಭವಾಗಿದೆ.
ಬೆಂಗಳೂರಿನ ದೊಡ್ಡಬಳ್ಳಾಪುರ ದಲ್ಲಿ ಈಗ ಕೊರಗಜ್ಜನ ದೈವಸ್ಥಾನ ಶುರುವಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಇದೇ ಭಾನುವಾರ ದೈವಕೋಲವೂ ನಡೆಯಲಿದೆ ಅಂತಾ ಆಮಂತ್ರಣ ಪತ್ರಿಕೆಯೂ ಶುರುವಾಗಿದೆ. ಇಲ್ಲಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿದ ಕುಟುಂಬ ನಮಗೆ ಕೊರಗಜ್ಜ ಕನಸಲ್ಲಿ ಬಂದು ಇಲ್ಲಿ ನೆಲೆಯಾಗುತ್ತೇನೆ ಅಂತಾ ಹೇಳಿದ್ದು, ಕಲ್ಲು ಸಿಕ್ಕಿದೆ ಅನ್ನುತ್ತಿದ್ದಾರೆ.
ಆದರೆ ಇದೆಲ್ಲವೂ ದುಡ್ಡಿನ ಬ್ಯುಸಿನೆಸ್ ಆಗಬಾರದು. ಕರಾವಳಿಯಲ್ಲಿ ದೈವಸ್ಥಾನ, ಭೂತಕೋಲ ನಡೆಯೋದು. ಅದನ್ನು ಬಿಟ್ಟು ಬೇರೆ ಕಡೆ ದುಡ್ಡಿಗಾಗಿ ದೈವ, ಕರಾವಳಿಯ ಭಕ್ತಿಯನ್ನು ಮಾರಾಟ ಮಾಡಲಾಗುತ್ತಿದೆ ಅಂತಾ ಕರಾವಳಿಯ ದೈವವನ್ನು ನಂಬುವ ಜನ ಕಿಡಿಕಾರುತ್ತಿದ್ದಾರೆ. ಹೀಗಾಗಿ ಕೊರಗಜ್ಜನನ್ನು ಪ್ರತಿಷ್ಠಾಪಿಸಿದ ಮಹಿಳೆಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.