Connect with us

FILM

ಉಡುಪಿ ಕಡಲತೀರದಲ್ಲಿ ಕೆಜಿಎಫ್ ಚಾಪ್ಟರ್ -2 ನ 2ನೇ ಹಂತದ ಶೂಟಿಂಗ್..!

ಉಡುಪಿ, ಅಕ್ಟೋಬರ್  8: ಸ್ಯಾಂಡಲ್ ವುಡ್ ಅಷ್ಟೇ ಅಲ್ದೇ ಇಡೀ ಭಾರತ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವಾದ ಕೆಜಿಎಫ್ ಚಾಪ್ಟರ್ -2 ನ 2ನೇ ಹಂತದ ಶೂಟಿಂಗ್ ಇಂದಿನಿಂದ ಶುರುವಾಗಿದೆ.

ಚಿತ್ರೀಕರಣದ ಕೊನೆಯ ಹಂತಕ್ಕೆ ಬಂದಿರುವ ಚಿತ್ರದ ಶೂಟಿಂಗ್ ಅಖಾಡಕ್ಕೆ ಇಂದಿನಿಂದ ರಾಕಿ ಭಾಯ್ ಎಂಟ್ರಿ ಕೊಟ್ಟಿದ್ದಾರೆ. ಸುಮಾರು 7 ತಿಂಗಳುಗಳ ಕಾಲ ಮನೆಯಲ್ಲೇ ಇದ್ದ ರಾಕಿಂಗ್ ಸ್ಟಾರ್ ಯಶ್ ಇಂದಿನಿಂದ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಉಡುಪಿ ಯ ಮಲ್ಪೆ ಸಮುದ್ರ ತೀರಲ್ಲಿ ನಡೆಯುವ ಚಿತ್ರೀಕರಣದಲ್ಲಿ ಯಶ್ ಜೊತೆ ನಾಯಕಿ ಶ್ರಿನಿಧಿ ಶೆಟ್ಟಿ ಸಹ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.

ಇನ್ನೂ ಚಿತ್ರೀಕರಣದಲ್ಲಿ ಭಾಗಿಯಾದ ನಂತರ ಯಶ್ ಇನ್‍ಸ್ಟಾಗ್ರಾಮ್‍ನಲ್ಲಿ‌ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು “ಸಮುದ್ರದ ಅಲೆಗಳನ್ನು ನಿಲ್ಲಿಸಲಾಗುವುದಿಲ್ಲ ಆದರೆ ನೌಕಾಯಾನ ಮಾಡಲು ನೀವು ಕಲಿಯಬಹುದು. ದೀರ್ಘ ವಿರಾಮದ ನಂತರ ರಾಕಿ ಇಂದಿನಿಂದ ನೌಕಾಯಾನ ಶುರು ಮಾಡಲಿದ್ದಾನೆ” ಎಂದು ಕ್ಯಾಪ್ಷನ್ ಹಾಕಿದ್ದಾರೆ. ಯಶ್ ಅವರ ಪೋಸ್ಟ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.