DAKSHINA KANNADA
10 ಸಂತ್ರಸ್ತರಿಗೆ 1,70,925 ಮೊತ್ತದ ಪರಿಹಾರಧನ ವಿತರಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಮಂಗಳೂರು, ಅಕ್ಟೋಬರ್ 8: ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಹತ್ತು ಜನ ಸಂತ್ರಸ್ತರಿಗೆ ಸಂತ್ರಸ್ತರಿಗೆ ನೀಡಲಾಯಿತು. ಒಟ್ಟು 1,70,925 ಮೊತ್ತದ ಪರಿಹಾರ ಧನದ ಚೆಕ್ ಅನ್ನು ಗುರುಪುರ ಕೈಕಂಬದ ನಾಡಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಸುನಿಲ್, ಉಪತಹಶಿಲ್ದಾರ್ ಶಿವಪ್ರಸಾದ್,ಕಂದಾಯ ನಿರೀಕ್ಷಕರಾದ ಆಸಿಫ್, ಗ್ರಾಮ ಲೆಕ್ಕಿಗರು, ಗ್ರಾಮ ಕರಣಿಕರು, ಗುರುಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಗುರುಪುರ, ,ಮಾಜಿ ಪಂ.ಸದಸ್ಯರು , ಉಪಸ್ಥಿತರಿದ್ದರು.