Connect with us

    LATEST NEWS

    ಕೇರಳ -ಮತ್ತೊಂದು ನಿಫಾ ವೈರಸ್ ಪ್ರಕರಣ – ಸೊಂಕಿತರ ಸಂಖ್ಯೆ 6ಕ್ಕೆ ಏರಿಕೆ

    ಕೋಯಿಕ್ಕೋಡ್ ಸೆಪ್ಟೆಂಬರ್ 15: ನಿಫಾ ವೈರಸ್ ಪ್ರಕರಣದಲ್ಲಿ ಕೇರಳದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದೀಗ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ನಿಫಾ ವೈರಸ್ ಸೊಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.


    ಸೋಂಕಿಗೆ ಒಳಗಾಗಿರುವ 39 ವರ್ಷದ ವ್ಯಕ್ತಿ ಕೋಯಿಕ್ಕೋಡ್​ನ ಆಸ್ಪತ್ರೆಯ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಸಚಿವರ ಕಚೇರಿ ಮಾಹಿತಿ ನೀಡಿದೆ. ಈಗಾಗಲೇ ನಿಫಾ ವೈರಸ್​ಗೆ ಇಬ್ಬರು ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

    ಈ ವಾರದ ಆರಂಭದಲ್ಲಿ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಇದು ಬಾಂಗ್ಲಾದೇಶದ ರೂಪಾಂತರಿಯಾಗಿದ್ದು, ಸೋಂಕು ತಗುಲುವ ವೇಗ ಕಡಿಮೆ ಇರುತ್ತದೆ, ಹಾಗೆಯೇ ಸಾವಿನ ಪ್ರಮಾಣ ಹೆಚ್ಚಾಗಿರುತ್ತದೆ. ಕೋಯಿಕ್ಕೋಡ್​ನಲ್ಲಿ ಸೋಂಕು ಹರಡಿದ ಕಾರಣ, ಜಿಲ್ಲೆಯ ಸುಮಾರು 11 ವಾರ್ಡ್​ಗಳನ್ನು ಕಂಟೈನ್ಮೆಂಟ್​ ವಲಯ ಎಂದು ಘೋಷಿಸಲಾಗಿದೆ. ಜಿಲ್ಲಾಡಳಿತ ಶನಿವಾರ ಸೆಪ್ಟೆಂಬರ್ 16ರವರೆಗೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply