Connect with us

    LATEST NEWS

    RSS ಕಾರ್ಯಕರ್ತನ ಕಗ್ಗೊಲೆ: ಇಂದು ಕೇರಳ ಬಂದ್

    ಕಾಸರಗೋಡು, ಜುಲೈ 30 : ದುಷ್ಕರ್ಮಿಗಳ ಗುಂಪೊಂದು ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಈ ಹತ್ಯೆಗೆ ಸಿಪಿಐ-ಎಂ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿರುವ ಕೇರಳ ರಾಜ್ಯ ಬಿಜೆಪಿ, ಇಂದು ಕೇರಳ ಬಂದ್‌ಗೆ ಕರೆ ನೀಡಿದೆ.

    ನಿನ್ನೆ  ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು,  ಆರ್ ಎಸ್ ಎಸ್ ಕಾರ್ಯಕರ್ತನಾದ 34 ವರ್ಷದ ರಾಜೇಶ್‌ ಅವರನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಕಡಿದು  ಎಡ ಕೈಯನ್ನು ಬೇರ್ಪಡಿಸಿ ಬಿಸಾಡಿ ಪರಾರಿಯಾಗಿತ್ತು. ಕೂಡಲೇ ಆಸ್ಪತ್ರೆಗೆ ಸೇರಿಸಿದರೂ ತೀವ್ರ ರಕ್ತ ಸ್ರಾವದಿಂದ ರಾಜೇಶ್ ಮೃತಪಟ್ಟಿದ್ದಾರೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕುಮ್ಮನಮ್‌ ರಾಜಶೇಖರನ್‌ ಸಹಿತ ಮತ್ತಿತರ ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದರು.

    Rss ಕಾರ್ಕರ್ತ ರಾಜೇಶ್ ಬರ್ಬರ ಹತ್ಯೆಯನ್ನು ಖಂಡಿಸಿರುವ ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕುಮ್ಮನಮ್‌ ರಾಜಶೇಖರನ್‌ ಅವರು, ಇದಕ್ಕೆ ಸಿಪಿಐ-ಎಂ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿದ್ದಾರೆ. ಆದರೆ ತಡ ರಾತ್ರಿ ಹೇಳಿಕೆ ಬಿಡುಗಡೆ ಮಾಡಿದ ಸಿಪಿಐ ಎಂ ನ ತಿರುವನಂತಪುರ ಜಿಲ್ಲೆಯ ಕಾರ್ಯದರ್ಶಿ ಅನವೂರು ನಾಗಪ್ಪನ್ ಅವರು ರಾಜೆಶ್ ಹತ್ಯೆಯಲ್ಲಿ ನಮ್ಮ ಪಾತ್ರ ಏನೂ ಇಲ್ಲ, ಅದು ಅಲ್ಲಿನ ಸ್ಥಳೀಯ ಸಮಸ್ಯೆಯಿಂದ ಸಂಭವಿಸಿದ್ದು ಎಂದಿದ್ದಾರೆ.  ಆದರೆ ರಾಜೇಶ್ ಬರ್ಬರ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಂತ ಹರತಾಳಕ್ಕೆ ಬಿಜೆಪಿ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದಲೇ ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲ್ಲಿಲ್ಲ. ಕಾಸರಗೋಡು, ಕಣ್ಣೂರು ಜಿಲ್ಲೆಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೋಲಿಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ.  ಕರ್ನಾಟಕ – ಕೇರಳ ಖಾಸಾಗಿ ಹಾಗೂ ಸರ್ಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬಿಜೆಪಿ ಕಚೇರಿ ಮೇಲಿನ ದಾಳಿ ಮತ್ತು ಸಿಪಿಐ – ಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್‌ ಪುತ್ರ ಬಿನೀಶ್‌ ಕೊಡಿಯೇರಿ ಮನೆ ಮೇಲೆ ದಾಳಿ ನಡೆದ ಬಳಿಕ ರಾಜ್ಯಾದ್ಯಂತ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ. ಜತೆಗೆ ಶುಕ್ರವಾರ ನಡೆದ ಹಿಂಸಾಚಾರ ಸಂಬಂಧ ಸಿಪಿಐ-ಎಂನ ಯುವ ಘಟಕದ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ 10 ಮಂದಿಯನ್ನು ಬಂಧಿಸಲಾಗಿದೆ.

    The Bharatiya Janata Party called for a statewide shutdown in Kerala to protest against the killing of a Rashtriya Swayamsevak Sangh worker allegedly by members of the CPIM

    Share Information
    Advertisement
    Click to comment

    You must be logged in to post a comment Login

    Leave a Reply