Connect with us

LATEST NEWS

ಕೀಚಕ ಗುರುವಿನಿಂದ ಕಾಮದಾಟ;ನೊಂದ ವಿದ್ಯಾರ್ಥಿನಿಯಿಂದ ತಕ್ಕಪಾಠ..

 

ಸುಳ್ಯ ಜುಲೈ – 29 :  ಗುರು ಬ್ರಹ್ಮ ಗುರು ವಿಷ್ಣು ಗುರ ದೇವೋ ಮಹೇಶ್ವರಾ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಹ, ಎನ್ನುವ ಮಾತು ಗುರುವಿಗಿರುವ ಗೌರವವನ್ನು ಸೂಚಿಸುತ್ತದೆ. ಆದರೆ ಈ ಗೌರವಕ್ಕೆ ವ್ಯತಿರಿಕ್ತವಾಗಿ ವರ್ತಿಸುವ ಗುರುಗಳೂ ಇದೀಗ ಸಮಾಜದಲ್ಲಿದ್ದು, ಇಂಥ ಗುರುಗಳ ವರ್ತನೆಯಿಂದ ಗುರುವಿನ ಮೇಲಿನ ಗೌರವವೇ ಕುಂದುವಂತೆ ಮಾಡಿದೆ. ಹೌದು ಇಂಥಹುದೇ ಒರ್ವ ಗುರು ಇದೀಗ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಮಣ್ಯ ಮಹಾವಿದ್ಯಾಲಯದಲ್ಲಿದ್ದಾನೆ. ಪುಷ್ಪರಾಜ್ ಎನ್ನುವ ಈ ಗುರು ಮಹಾಶಯ ತನ್ನ ವಿದ್ಯಾರ್ಥಿನಿಗೇ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುವ ಮೂಲಕ ತನ್ನ ಲಫಂಗತನ ಪ್ರದರ್ಶಿಸಿದ್ದಾನೆ. ಫೆಸ್ಬುಕ್ ಮೆಸೆಂಜರ್ ನಲ್ಲಿ ವಿದ್ಯಾರ್ಥಿನಿಯ ಜೊತೆಗೆ ತರಗತಿಯ ವಿಚಾರವಾಗಿ ಮಾತುಕತೆ ಆರಂಭಿಸಿದ್ದ ಈತ ಬಳಿಕ ವಿದ್ಯಾರ್ಥಿನಿಯ ಜೊತೆ ಅಶ್ಲೀಲವಾಗಿ ಮಾತನಾಡಲು ಪ್ರಾರಂಭಿಸಿದ್ದಾನೆ.ಇದರಿಂದ ನೊಂದ ವಿದ್ಯಾರ್ಥಿನಿಯೀಗ ತನ್ನ ಗುರುವಿನ ಈ ಲಫಂಗತನವನ್ನು ಬಯಲು ಮಾಡಲು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾಳೆ. ತನ್ನ ಗುರ ಯಾವ ರೀತಿಯಾಗಿ ತನ್ನಲ್ಲಿ ವರ್ತಿಸುತ್ತಿದ್ದಾನೆ ಎನ್ನುವ ಮೆಸೇಜ್ ಗಳ ಸ್ಕ್ಕೀನ್ ಶಾಟ್ ತೆಗೆದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ. ಇದರಿಂದ ಹೆದರಿದ ಪುಷ್ಪರಾಜ್ ಎನ್ನುವ ಕಾಮ ಗುರು ಇದೀಗ ಕಾಲೇಜಿನ ರಾಜೀನಾಮೆ ಸಲ್ಲಿಸಿದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗೆ ಕಿರುಕುಳ ನೀಡಿದ ಈ ಉಪನ್ಯಾಸಕನ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಆತನ ವಿರುದ್ಧ ಕಾನೂನು ಕ್ರಮಕ್ಕೂ ಒತ್ತಡ ಹೆಚ್ಚುತ್ತಿದೆ.

Facebook Comments

comments