Connect with us

UDUPI

ಥ್ರಿಲ್ಲರ್ , ಸಸ್ಪೆನ್ಸ್ ‘ಅನುಕ್ತ’ ಕ್ಕೆ ಮುಹೂರ್ತ

ಥ್ರಿಲ್ಲರ್ , ಸಸ್ಪೆನ್ಸ್ ‘ಅನುಕ್ತ’ ಕ್ಕೆ ಮುಹೂರ್ತ

ಉಡುಪಿ,ಅಕ್ಟೋಬರ್ 11: ದೇಯಿ ಪ್ರೊಡಕ್ಷನ್ ನಿರ್ಮಾಣದ ‘ಅನುಕ್ತ’ ಕನ್ನಡ ಚಲನಚಿತ್ರದ ಮೂಹೂರ್ತ ಕಾರ್ಯಕ್ರಮ ಉಡುಪಿಯ ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ನಡೆಯಿತು. ಚಲನಚಿತ್ರ ಮುಹೂರ್ತಕ್ಕೆ ಪಶ್ಚಿಮವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಚಾಲನೆ ನೀಡಿದರು. ಸಸ್ಪೆನ್ಸ್ , ಥ್ರಿಲ್ಲರ್ ಕಥಾ ಹಂದರ ಹೊಂದರುವ ಈ ಚಿತ್ರದ ಚಿತ್ರೀಕರಣವು ಮೂಡಿಗೆರೆ, ಮಡಿಕೇರಿ, ಹೆಬ್ರಿ, ಬ್ರಹ್ಮಾವರ, ಮಂಗಳೂರು ಹಾಗೂ ಉಡುಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯಲಿದೆ. ಸಮಾರಂಭದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ವೇದಮೂರ್ತಿ ಹಯವದನ ತಂತ್ರಿ, ಯಕ್ಷದ್ರುವ ಫೌಂಡೇಶನ್ ನ ಸತೀಶ್ ಪಟ್ಲ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ತಿಕ್ ಅತ್ತಾವರ ಹಾಗೂ ಸುನೀತಾ ಭಟ್ ತಾರಾಂಗಣದ ಈ ಚಿತ್ರವನ್ನು ಉದ್ಯಮಿ ಹರೀಶ್ ಬಂಗೇರ ಅವರು ನಿರ್ಮಾಣ ಮಾಡುತ್ತಿದ್ದು, ಚಿತ್ರದ ನಿರ್ದೇಶನವನ್ನು ಅಶ್ವಥ್ ಸ್ಯಾಮುವೆಲ್ ಮಾಡಲಿದ್ದಾರೆ. ಛಾಯಾಗ್ರಹಣ ಮನೋಹರ್ ಜೋಶಿ, ಸಂತೋಷ ಕುಮಾರ್ ಕೊಂಚಾಡಿ ಕಥೆ, ನೋಬಿನ್ ಪೌಲ್ ಸಂಗೀತ ನಿರ್ದೇಶನ ನೀಡಲಿದ್ದಾರೆ. ಚಿತ್ರ ಮುಂದಿನ ಮಾರ್ಚ್ ತಿಂಗಳಿನಲ್ಲಿ ಚಿತ್ರೀಕಣಗೊಂಡು ತೆರೆ ಕಾಣಲಿದೆ.

Facebook Comments

comments