BANTWAL
ಕಲ್ಲಡ್ಕ ಶ್ರೀರಾಮ ಕೇಂದ್ರಕ್ಕೆ ನಟಿ ಅಮೂಲ್ಯ ಭೇಟಿ, ಗೋ ಪೂಜೆಯಲ್ಲಿ ಭಾಗಿ
ಕಲ್ಲಡ್ಕ ಶ್ರೀರಾಮ ಕೇಂದ್ರಕ್ಕೆ ನಟಿ ಅಮೂಲ್ಯ ಭೇಟಿ, ಗೋ ಪೂಜೆಯಲ್ಲಿ ಭಾಗಿ
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಚಿತ್ರನಟಿ ಅಮೂಲ್ಯ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಪತಿ, ಉದ್ಯಮಿ ಜಗದೀಶ್ ಜೊತೆಗೆ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ ಅವರು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಸುಧಾರಾ ಗೋಶಾಲೆಯಲ್ಲಿ ನಡೆದ ಗೋಪೂಜೆಯಲ್ಲೂ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಅವರು ಶಿಶುಮಂದಿರದ ಸೀತಾ ಕುಟೀರದ ಉದ್ಘಾಟನೆಯನ್ನೂ ನೆರವೇರಿಸಿದರು. ಕೇಂದ್ರ ನೂತನವಾಗಿ ನಿರ್ಮಿಸಲು ಉದ್ಧೇಶಿಸಿರುವ ಮಹೇಂದ್ರ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಂಡಿದ್ದರು. ಶಿಶು ಮಂದಿರದ ಮಕ್ಕಳ ಜೊತೆ ಬೆರೆತ ಅವರು ವಿದ್ಯಾಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲೂ ಭಾಗಿಯಾದರು. ಕಲ್ಲಡ್ಕ ಶಾಲೆಯ ಬಗ್ಗೆ ಮೆಚ್ಚುಗೆಯ ನುಡಿಯನ್ನೂ ಅವರು ಇದೇ ಸಂದರ್ಭದಲ್ಲಿ ಆಡಿದರು. ಸಂಸ್ಕಾರಯುತ ಶಿಕ್ಷಣವನ್ನು ನೀಡುವ ಶ್ರೀರಾಮ ಕೇಂದ್ರದಂತಹ ಶಾಲೆಗಳು ಬೆಂಗಳೂರಿನಂತಹ ಮಹಾನಗರಗಳಲ್ಲೂ ಆರಂಭಗೊಳ್ಳಬೇಕಿದೆ. ಸಂಪ್ರದಾಯ,ಸಂಸ್ಕೃತಿಯನ್ನು ಕಲಿಸುವ ಪ್ರಯತ್ನ ಬೆಂಗಳೂರಿನಲ್ಲೂ ಆಗಬೇಕಿದೆ ಎಂದು ಅವರು ಆಶಿಸಿದರು.ಸಂಸ್ಥೆಯ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ನಟಿಯನ್ನು ಸ್ವಾಗತಿಸಿದರು.
You must be logged in to post a comment Login