LATEST NEWS
ಪೇಜಾವರ ಶ್ರೀಗಳಿಗೆ ಫೆಮೋರಾಲ್ ಶಸ್ತ್ರಚಿಕಿತ್ಸೆ
ಪೇಜಾವರ ಶ್ರೀಗಳಿಗೆ ಫೆಮೋರಾಲ್ ಶಸ್ತ್ರಚಿಕಿತ್ಸೆ
ಉಡುಪಿ ಅಕ್ಟೋಬರ್ 26: ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ನಿನ್ನೆ ರಾತ್ರಿ ದಾಖಲಾಗಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಆರೋಗ್ಯದಿಂದ ಇದ್ದಾರೆ. ಪೇಜಾವರ ಶ್ರೀಗಳಿಗೆ ಫೆಮೋರಾಲ್ ಆಪರೇಷನ್ ಮಾಡಲಾಗಿದ್ದು. ಫೆಮೋರಾಲ್ ಆಪರೇಷನ್ ,ಹರ್ನಿಯಾ ಆಪರೇಷನ್ ನಂತರ ನಡೆಯುವ ಚಿಕಿತ್ಸೆಯಾಗಿದೆ. ಈ ಹಿನ್ನಲೆಯಲ್ಲಿ ಇಂದು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಈ ಆಪರೇಷನ್ ನಡೆಸಲಾಗಿದೆ.
ನಿನ್ನೆ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಪೇಜಾವರ ಶ್ರೀ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಸ್ವಾಮೀಜಿ ಅವರು ಆರೋಗ್ಯವಾಗಿದ್ದು, ಸ್ನಾನ- ಪೂಜೆ – ಅನುಷ್ಟಾನದಲ್ಲಿ ಪಾಲ್ಗೊಂಡಿದ್ದಾರೆ. ಪೇಜಾವರ ಶ್ರೀಗಳಿಗೆ ಎರಡು ದಿನ ವಿಶ್ರಾಂತಿಯ ಅಗತ್ಯವಿದ್ದು ಕೆಎಂಸಿಯಲ್ಲೇ ವಿಶ್ರಮಿಸಲಿದ್ದಾರೆ.
ಪೇಜಾವರ ಶ್ರೀಗಳು ಶನಿವಾರ ಸಂಜೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದು ಪೇಜಾವರಶ್ರೀ ಆಪ್ತಸಹಾಯಕರು ಮಾಹಿತಿ ನೀಡಿದ್ದಾರೆ.
You must be logged in to post a comment Login