Connect with us

    LATEST NEWS

    ಮಂಗಳೂರು ಡ್ರಗ್ಸ್ ಸೇಲ್ಸ್ ಮೆನ್ ಗಳಾದ ವೈದ್ಯಕೀಯ ಇಂಜಿನಿಯರಿಂಗ್ ವಿಧ್ಯಾರ್ಥಿಗಳು

    ಮಂಗಳೂರು ಡ್ರಗ್ಸ್ ಸೇಲ್ಸ್ ಮೆನ್ ಗಳಾದ ವೈದ್ಯಕೀಯ ಇಂಜಿನಿಯರಿಂಗ್ ವಿಧ್ಯಾರ್ಥಿಗಳು

    ಮಂಗಳೂರು ಅಕ್ಟೋಬರ್ 26: ಮಂಗಳೂರು ಮಹಾನಗರ ಡ್ರಗ್ಸ್ ಜಾಲತಾಣವಾಗಿ ಪರಿವರ್ತನೆಗೊಳ್ಳುತ್ತಿದೆ. ಬುದ್ದಿವಂತರ ಜಿಲ್ಲೆಯೆಂದು ಕರೆಸಿಕೊಳ್ಳುವ ದಕ್ಷಿಣಕನ್ನಡ ಜಿಲ್ಲೆಯ ಬುದ್ದಿವಂತ ಯುವಜನತೆ ಡ್ರಗ್ಸ್ ದಂಧೆಯ ಸೇಲ್ಸ್ ಮೆನ್ ಗಳಾಗಿ ಬದಲಾಗಿದ್ದಾರೆ. ಇದಕ್ಕೆ ಬಲವಾದ ಸಾಕ್ಷಿಯಾಗಿ ಇಂದು ಮಂಗಳೂರು ಪೊಲೀಸರು ಬಂಧಿಸಿದ ಡ್ರಗ್ಸ್ ಜಾಲದ ಆರೋಪಿಗಳು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿಧ್ಯಾರ್ಥಿಗಳಾಗಿದ್ದು, ಉನ್ನತ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳು ಮಾದಕ ವಸ್ತುಗಳ ಮಾರಾಟ ಇಳಿದಿದ್ದಾರೆ.

    ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಲ್.ಎಸ್.ಡಿ.(Lysergic Acid diethylamide) ಎಂ.ಡಿ.ಎಂ.ಎ. (Methylene Dioxy Meth Amphetami) ಮತ್ತು ಎಂ.ಡಿ.ಎಂ. (Methylene Dioxy Methamthetami) ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ, ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಬೇಧಿಸಿ ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿರುತ್ತಾರೆ.

    ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿಲಾಗಿದೆ.

    ಕಾಸರಗೋಡು ಜಿಲ್ಲೆಯ ನಿಖಿಲ್.ಕೆ.ಬಿ(24), ಮಂಗಳೂರು ಕುಲಶೇಖರದ ಶ್ರವಣ ಪೂಜಾರಿ (23), ಕೇರಳದ ಕಣ್ಣೂರಿನ ನಿವಾಸಿ ರೋಶನ್ ವೇಗಸ್ (22), ಕೇರಳದ ತ್ರಿಶೂರ್ ನ ಬಾಶಿಂ ಬಸೀರ್(22), ಈ ಮೇಲ್ಕಂಡ ಆರೋಪಿಗಳಲ್ಲಿ ಆರೋಪಿ ನಿಖಿಲ್, ಶ್ರವಣ್ ಪೂಜಾರಿ ಇಂಜಿನಿಯರಿಂಗ್ ವಿಧ್ಯಾರ್ಥಿಯಾಗಿದ್ದು, ಆರೋಪಿ ರೋಷನ್ ಸುರೇಶ್ ಮತ್ತು ಬಾಸಿಂ ಬಶೀರ್ ಇಬ್ಬರೂ ನಗರದ ವೈಧ್ಯಕೀಯ ಕಾಲೇಜಿನಲ್ಲಿ ದಂತ ವೈಧ್ಯಕೀಯ ವಿಧ್ಯಾರ್ಥಿಗಳಾಗಿರುತ್ತಾರೆ.

    ಈ ಮೇಲಿನವರಿಂದ ಈ ಕೆಳಕಂಡ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

    1. ಎಂ.ಡಿ.ಎಂ.ಎ. ಪೌಡರ್ 9.00 ಗ್ರಾಂ
    2. ಎಲ್.ಎಸ್.ಡಿ ಸ್ಟಾಂಪ್ -185
    3. ಎಂ.ಡಿ.ಎಂ. ಪಿಲ್ಸ್ (ಪಿಲ್ಸ್ – 25)
    4. ಇಲೆಕ್ಟ್ರಾನಿಕ್ ತೂಕದ ಯಂತ್ರ -1
    5. ಮೊಬೈಲ್ – 4
    6. ಮೋಟಾರ್ ಸೈಕಲ್ (ಯಮಹಾ) -1
    7. ಮೋಟಾರ್ ಸೈಕಲ್(ಬುಲೆಟ್)-1
    8. ಹುಕ್ಕ – 2

    ಈ ಮೇಲ್ಕಂಡ ಮಾದಕ ದ್ರವ್ಯಗಳನ್ನು ತೂಕ ಮಾಡಿಕೊಡಲು ಒಬ್ಬರು ಸ್ವತಹ ಒಂದು ತೂಕದ ಯಂತ್ರವನ್ನು ಬಳಸುತ್ತಿದ್ದು, ಅದನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮತ್ತು 1 ನೇ ಆರೋಪಿ ನಿಖಿಲ್ ಎಂವವನು ಈ ಮಾದಕ ದ್ರವ್ಯವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿರುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.ಈ ಪ್ರಕರಣದ ಜಾಲದಲ್ಲಿ ಇನ್ನೂ ಕೆಲವು ಪ್ರಮುಖ ಆರೋಪಿಗಳನ್ನು ಬಂಧಿಸುವುದು ಬಾಕಿ ಇರುತ್ತದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

    ಈ ಮೇಲೆ ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 5.30 ಲಕ್ಷ ಎಂದು ಅಂದಾಜಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply