DAKSHINA KANNADA
ಕರಾವಳಿಯಲ್ಲಿ ಮತ್ತೆ ಕಂಬಳ
ಮಂಗಳೂರು ಸೆಪ್ಟೆಂಬರ್ 15: ಕರಾವಳಿಯಲ್ಲಿ ಈ ಋತುವಿನ ಕಂಬಳಕ್ಕೆ ಸಿದ್ಧತೆ ಆರಂಭಗೊಂಡಿದೆ . ಈ ಬಾರಿಯ ಕರಾವಳಿ ಉತ್ಸವದ ಭಾಗವಾಗಿ ಪಿಲಿಕುಳದಲ್ಲಿ ಕಂಬಳ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ .
ಮಂಗಳೂರಿನಲ್ಲಿ ಕರಾವಳಿ ಉತ್ಸವ ಈ ಬಾರಿ ಡಿಸೆಂಬರ್ ನಲ್ಲಿ ನಡೆಯಲಿದೆ. ಇದರ ಭಾಗವಾಗಿ ಪಿಲಿಕುಳದಲ್ಲಿ ನೇತ್ರಾವತಿ – ಫಲ್ಗುಣಿ ಜೋಡುಕೆರೆ ಕಂಬಳ ಆಯೋಜನೆಗೆ ಜಿಲ್ಲಾಡಳಿತ ಚಿಂತನೆ ನಡೆಸಿದ್ದು ಈ ನಿಟ್ಟಿನಲ್ಲಿ ಸಭೆ ಕೂಡ ನಡೆಸಿದೆ. ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ 2014ರಲ್ಲಿ ಕೊನೆಯ ಬಾರಿಗೆ ಕಂಬಳ ನಡೆದಿತ್ತು .
2015ರಲ್ಲಿ ಕಂಬಳ ಆಯೋಜನೆ ಗೊಂಡಿರಲಿಲ್ಲ. 2016 ರಲ್ಲಿ ಕಂಬಳದ ಮೇಲೆ ನಿಷೇಧ ಹೇರಿದ್ದ ಕಾರಣ ಕರಾವಳಿ ಭಾಗದಲ್ಲಿ ಎಲ್ಲೂ ಕಂಬಳ ಆಯೋಜನೆ ಗೊಂಡಿರಲಿಲ್ಲ ಆದರೆ ಈ ಬಾರಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ಕಂಬಳ ನಡೆಸಲು ಅವಕಾಶವಿದೆ.
ಪಿಲಿಕುಳ ನಿಸರ್ಗಧಾಮದಲ್ಲಿ ಈ ಬಾರಿ ಕಂಬಳ ನಡೆಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ ಕೆ. ಜಿ. ಜಗದೀಶ್ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ . ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಅಂತಿಮ ತೀರ್ಮಾನ ತೆಗೆದು ಕೊಳ್ಳಲು ತೀರ್ಮಾನಿಸಲಾಗಿದೆ.
You must be logged in to post a comment Login