Connect with us

DAKSHINA KANNADA

ಸೈನೇಡ್ ಮೋಹನ್ ಗೆ ಜೀವಾವಧಿ ಶಿಕ್ಷೆ

Share Information

ಮಂಗಳೂರು,ಸೆಪ್ಟಂಬರ್ 15: ಸೈಕೋಪಾತ್ ಸೈನೇಡ್ ಮೋಹನ್ ನ ನಾಲ್ಕನೇ ಹತ್ಯೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾ ಆರನೇ ಹೆಚ್ಚುವರಿ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 17.09.2009 ರಲ್ಲಿ ಪುತ್ತೂರು ಮೂಲದ ಯುವತಿಯನ್ನು ಮಡಿಕೇರಿಯಲ್ಲಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿದ್ದು, ಈ ಪ್ರಕರಣ ಹೊರತುಪಡಿಸಿ ಇನ್ನೂ 16 ಕೊಲೆ ಪ್ರಕರಣಗಳು ಈತನ ಮೇಲಿದೆ.

ಯಾರೀತ ಸೈನೆಡ್ ಮೋಹನ್

ಪ್ರೀತಿಯ ನಾಟಕವಾಡಿ, ಯುವತಿಯರನ್ನು ದೂರದೂರಿಗೆ ಕೊಂಡೊಯ್ಯುವ ಮೋಹನ್ ಯುವತಿಯರನ್ನು ಅತ್ಯಾಚಾರ ಮಾಡಿ ಬಳಿಕ ಸೈನೇಡ್ ತಿನ್ನಿಸಿ ಕೊಲೆ ನಡೆಸುತ್ತಿದ್ದನು. 2004 ರಿಂದ 2009 ರ ಅವಧಿಯಲ್ಲಿ ಒಟ್ಟು 20 ಯುವತಿಯರನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ ಮೋಹನ್ ಕುಮಾರ್.

ಪ್ರಕರಣದ ಹಿನ್ನಲೆ

ಪುತ್ತೂರಿನ ಪಟ್ಟೆ ಮಜಲಿನ 22 ವರ್ಷದ ಯುವತಿಯನ್ನು ಆನಂದ್ ಎನ್ನುವ ಹೆಸರಿನಲ್ಲಿ ಪರಿಚಯಿಸಿಕೊಂಡಿದ್ದ ಸೈನೇಡ್ ಕಿಲ್ಲರ್ ಮೋಹನ್ ಮಡಿಕೇರಿಗೆ ಕರೆದೊಯ್ದಿದ್ದನು.

ಬಳಿಕ ಆಕೆಯನ್ನು ಅತ್ಯಾಚಾರ ನಡೆಸಿದ ಬಳಿಕ ಆಕೆಗೆ ಗರ್ಭನಿರೋಧಕ ಮಾತ್ರೆ ಎಂದು ನಂಬಿಸಿ ಸೈನೇಡನ್ನು ತಿನ್ನಿಸಿ ಕೊಲೆ ಮಾಡಿದ್ದಾನೆ. ಬಂಟ್ವಾಳದ ಬರಿಮಾರಿನ ಯುವತಿಯ ಕೊಲೆ ಪ್ರಕರಣದ ಪತ್ತೆಯೊಂದಿಗೆ ಸೆನೈಡ್ ಮೋಹನನ ಸರಣಿ ಹತ್ಯೆ ವಿಚಾರ ಬಯಲಾಗಿತ್ತು.  ಸೈನೆಡ್ ಮೋಹನನ ಬಂಧನದೊಂದಿಗೆ ಇತರ ಪ್ರಕರಣಗಳೂ ಬೆಳಕಿಗೆ ಬಂದಿದ್ದವು. ಆತನ ಮನೆ ಶೋಧದ ವೇಳೆ ಪಟ್ಟೆಮಜಲಿನ ಯುವತಿಯ ಮೊಬೈಲ್ ಕೂಡಾ ಪತ್ತೆಯಾಗಿತ್ತು. ಈಗಾಗಲೇ ಮೂರು ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಯನ್ನು ಅನುಭವಿಸುತ್ತಿರುವ ಸೈನೇಡ್ ಮೋಹನ್ ಗೆ ಇದೀಗ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಮೋಹನ್ ಕುಮಾರ್ ಇಂದು ಶಿಕ್ಷೆಯ ಪ್ರಕಟಣೆಯ ಹಿನ್ನಲೆಯಲ್ಲಿ ಮಂಗಳೂರಿನ ನ್ಯಾಯಾಲಯಕ್ಕೆ ಹಾಜರಾಗಿದ್ದ.


Share Information
Advertisement
Click to comment

You must be logged in to post a comment Login

Leave a Reply