LATEST NEWS
ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ತಲೆ ಸರಿ ಇದೆಯೇ ? – ನಲಿಕೆಯವರ ಸಮಾಜ ಸೇವಾ ಸಂಘ

ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ತಲೆ ಸರಿ ಇದೆಯೇ ? – ನಲಿಕೆಯವರ ಸಮಾಜ ಸೇವಾ ಸಂಘ
ಮಂಗಳೂರು ಎಪ್ರಿಲ್ 11: ಭೂತ ಕಟ್ಟುವವನಿಗೆ ತಲೆ ಸರಿ ಇಲ್ಲ ಎಂದು ಹೇಳಿಕೆ ನೀಡುವ ಮೂಲಕ ಆರ್ ಎಸ್ಎಸ್ ಮುಖಂಡ಼ ಕಲ್ಲಡ್ಕ ಪ್ರಭಾಕರ್ ಭಟ್ ನಮ್ಮ ಸಮಾಜವನ್ನು ನಿಂಧಿಸಿದ್ದಾರೆ ಎಂದು ನಲಿಕೆಯವರ ಸಮಾಜ ಸೇವಾ ಸಂಘ ಆರೋಪಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್. ಪ್ರಭಾಕರ್ ಶಾಂತಿಕೋಡಿ ಈ ರೀತಿಯ ಹೇಳಿಕೆಯ ನೀಡುವ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ತಲೆ ಸರಿ ಇದೆಯೇ ಎಂದು ಪ್ರಶ್ನಿಸಿದರು.

ಕಲ್ಲಡ್ಕ ಪ್ರಬಾಕರ್ ಭಟ್ ಅವರ ಹೇಳಿಕೆಯಿಂದ ನಲಿಕೆಯವರ ಸಮಾಜಕ್ಕೆ ನೋವಾಗಿದೆ. ಇನ್ನು ಮುಂದಕ್ಕೆ ಈ ರೀತಿ ಹೇಳಿಕೆ ನೀಡಿದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಈಗಾಗಲೇ ಕಲ್ಲಡ್ಕ ಭಟ್ ಹೇಳಿಕೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಿದ್ದೇವೆ ಎಂದು ತಿಳಿಸಿದರು.