ಕರಾವಳಿ ಮೀನುಗಾರರಿಗೆ ಮೀನುಗಾರಿಕೆ ನಿಲ್ಲಿಸಿ ವ್ಯವಸಾಯ ಮಾಡಲು ಹುಚ್ಚ ವೆಂಕಟ್ ಸಲಹೆ

ಮಂಗಳೂರು ಎಪ್ರಿಲ್ 11: ಕರಾವಳಿಯ ಮೀನುಗಾರರಿಗೆ ಮೀನುಗಾರಿಕೆ ಬಿಟ್ಟು ವ್ಯವಸಾಯ ಮಾಡಲು ಹುಚ್ಚ ವೆಂಕಟ್ ಸಲಹೆ ನೀಡಿದ್ದಾರೆ.

ಇಂದು ಮಂಗಳೂರಿನ‌ಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ನಟ ಹುಚ್ಚ ವೆಂಕಟ್ ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದು , ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಎಂಎಲ್ ಎ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದು ಹೇಳಿದರು.

ಆದರೆ ನಾನು ಚುನಾವಣಾ ಪ್ರಚಾರ ಮಾಡಲ್ಲ, ಜನರಿಗೆ ನಾನು ಡ್ರಿಂಕ್ಸ್, ಸೀರೆ, ಹಣ ಕೊಡಲ್ಲ, ಓಟು ಕೇಳಲ್ಲ ಹಾಗೂ ಮನೆ- ಮನೆ‌ ತೆರಳಿ ಪ್ರಚಾರ ಮಾಡಲ್ಲ ಎಂದು ತಿಳಿಸಿದರು.

ಕರಾವಳಿಯಲ್ಲಿ ಮೀನುಗಾರಿಕೆ ನಡೆಸುವವರು ಮೀನುಹಿಡಿಯಲು ಹೋಗಿ ಯಾಕೆ ಲೈಫ್ ನಲ್ಲಿ ರಿಸ್ಕ್ ತೆಗೊಬೇಕು ಅದರ ಬದಲು ವ್ಯವಸಾಯ ಮಾಡಬಹುದು ಎಂದು ಸಲಹೆ ನೀಡಿದರು.

ಯಾರೋ‌ ಮೀನು ತಿನ್ನಬೇಕೆಂದು ನೀವ್ಯಾಕೆ ಜೀವನ‌ ರಿಸ್ಕ್‌ ತೆಗದುಕೊಳ್ಳುತ್ತಿರಾ ಎಂದು ಪ್ರಶ್ನೆ ಮಾಡಿದರು.

ಇಷ್ಟು ವರ್ಷ ಸರಕಾರಕ್ಕೆ ಹಣ ಕಟ್ಟಿದ್ದೇವೆಂದು ಸರಕಾರಕ್ಕೆ ಹೇಳಿ, ಸರಕಾರದಿಂದ ಸಹಾಯ ಪಡೆದು ವ್ಯವಸಾಯ ಮಾಡಿ ಎಂದು ಸಲಹೆ ನೀಡಿದರು.

ವಿಡಿಯೋಗಾಗಿ…

Facebook Comments

comments