Connect with us

    DAKSHINA KANNADA

    ಅಪಸ್ಮಾರದಿಂದ ಮೂರ್ಚೆ ತಪ್ಪಿ ಚರಂಡಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿದ ಕಡಬ ಪೊಲೀಸರು

    ಅಪಸ್ಮಾರದಿಂದ ಮೂರ್ಚೆ ತಪ್ಪಿ ಚರಂಡಿಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿದ ಕಡಬ ಪೊಲೀಸರು

    ಕಡಬ ಫೆಬ್ರವರಿ 22: ಯಾರಾದರೂ ರಸ್ತೆ ಬದಿಯಲ್ಲಿ ಬಿದ್ದಿದ್ದರೆ ಅವರು ಕುಡಿದು ಬಿದ್ದಿದ್ದಾರೆ ಎಂದು ಸಾಮಾನ್ಯವಾಗಿ ಯಾರು ಕಾಳಜಿ ವಹಿಸುವುದಿಲ್ಲ.ಆದರೆ ಕಡಬ ಪೊಲೀಸರು ಅಪಸ್ಮಾರದಿಂದ ಅಥವಾ ಮೂರ್ಚೆ ತಪ್ಪಿ ಬಿದ್ದಿದ್ದ ವ್ಯಕ್ತಿಯ ಪಾಲಿಗೆ ದೇವರಾಗಿ ಬಂದು ಜೀವ ಕಾಪಾಡಿದ ಘಟನೆ ರಾಮಕುಂಜದಲ್ಲಿ ನಡೆದಿದೆ.

    ಕಡಬ ಠಾಣಾ ಎಸ್. ಐ ರುಕ್ಮ ನಾಯ್ಕ್ ಮತ್ತು ಸಿಬ್ಬಂದಿಗಳಾದ ಭವಿತ್ ರೈ, ಪೋಲೀಸ್ ವಾಹನ ಚಾಲಕ ಕನಕರಾಜ್ ಕರ್ತವ್ಯ ನಿಮಿತ್ತ ತೆರಳಿ ವಾಪಾಸು ಬರುತ್ತಿದಾಗ ಆತೂರಿನಲ್ಲಿ ವ್ಯಕ್ತಿಯೊಬ್ಬ ಬಿಸಿಲಿನಲ್ಲಿ ಚರಂಡಿಗೆ ಬಿದ್ದದನ್ನು ಗಮನಿಸಿದ್ದಾರೆ. ಅಲ್ಲದೆ ಬಿದ್ದು ಗಾಯವಾಗಿರುವುದನ್ನು ಮನಗಂಡು ಆತನಿಗೆ ಪ್ರಥಮ ಚಿಕಿತ್ಸೆ ಮಾಡಿ ಉಪಚರಿಸಿದ್ದಾರೆ. ನಂತರ ಅಂಬ್ಯುಲೆನ್ಸ್ ಕರೆಸಿ ಪುತ್ತೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಇವರಿಗೆ ಅಲ್ಲಿನ ಸ್ಥಳೀಯರೂ ಸಹಕರಿಸಿದ್ದಾರೆ.

    ಸಮಾಜದಲ್ಲಿ ಪೊಲೀಸರ ಬಗ್ಗೆ ನಕಾರಾತ್ಮಕ ಚಿಂತನೆಗಳೇ ಹೆಚ್ಚು ಸುದ್ದಿಯಾಗುವ ಈ ಕಾಲದಲ್ಲಿ ಈ ಘಟನೆಯ ಮೂಲಕ ಪೋಲೀಸರ ಮಾನವೀಯ ಮುಖವೂ ಅನಾವರಣಗೊಂಡಿದೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply