Connect with us

    LATEST NEWS

    ಕಂಬಳ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ಮತ್ತೊಂದು ಸಾಧನೆ ಕಂಬಳ ಋತುವಿನಲ್ಲಿ 39 ಚಿನ್ನದ ಪದಕ

    ಕಂಬಳ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ಮತ್ತೊಂದು ಸಾಧನೆ ಕಂಬಳ ಋತುವಿನಲ್ಲಿ 39 ಚಿನ್ನದ ಪದಕ

    ಮಂಗಳೂರು ಫೆಬ್ರವರಿ 23: ಕರಾವಳಿ ಕಂಬಳ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ಮತ್ತೊಂದು ಸಾಧನೆ ಮರೆದಿದ್ದು ಕಂಬಳ ಋತುವಿನಲ್ಲಿ ಒಟ್ಟು 39 ಚಿನ್ನದ ಪದಕ ಗಳಿಸಿದ ಸಾಧನೆಗೈದಿದ್ದಾರೆ.

    ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಪೈವಳಿಕೆಯ ಬೋಳಂಗಳದಲ್ಲಿ ನಡೆದ ಕಂಬಳದಲ್ಲಿ ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಅಣ್ಣ ತಮ್ಮ ಜೋಡುಕೆರೆ ಕಂಬಳದ ಎರಡು ವಿಭಾಗಗಳಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಇಂದು ನಡೆದ ಕಂಬಳದ ಹಗ್ಗ ಮತ್ತು ನೇಗಿಲು ವಿಭಾಗದಲ್ಲಿ ಶ್ರೀನಿವಾಸ್ ಗೌಡ ಅವರು ಚಿನ್ನದ ಪದಕ ಗಳಿಸಿದ್ದಾರೆ.

    ಈ ಮೂಲಕ ಅವರು ಈ ಬಾರಿಯ ಕಂಬಳ ಋತುವಿನಲ್ಲಿ ಒಟ್ಟು 39 ಚಿನ್ನದ ಪದಕ ಗಳಿಸಿದ ಸಾಧನೆಗೈದಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ನಡೆದ ಈ ಕಂಬಳ ಕೂಟದಲ್ಲಿ ಒಟ್ಟು 101 ಜೋಡಿ ಕೋಣಗಳು ಭಾಗವಹಿಸಿದ್ದವು.

    Share Information
    Advertisement
    Click to comment

    You must be logged in to post a comment Login

    Leave a Reply