LATEST NEWS
ಹೌಸಿಂಗ್ ಫಾರ್ ಆಲ್ ಯೋಜನೆಯ ಕುರಿತು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ- ಜೆ.ಆರ್ ಲೋಬೋ
ಹೌಸಿಂಗ್ ಫಾರ್ ಆಲ್ ಯೋಜನೆಯ ಕುರಿತು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ- ಜೆ.ಆರ್ ಲೋಬೋ
ಮಂಗಳೂರು ಏಪ್ರಿಲ್ 29: ಶಕ್ತಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೌಸಿಂಗ್ ಫಾರ್ ಆಲ್ ಯೋಜನೆ ಕುರಿತು ಸಿಪಿಐಎಂ ಹಾಗೂ ಬಿಜೆಪಿ ಮುಖಂಡರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್. ಲೋಬೊ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಸತಿ ಸಂಕೀರ್ಣ ಯೋಜನೆಗೆ ಶಕ್ತಿನಗರದ ರಾಜೀವ್ ಗಾಂಧಿ ಕಾಲೋನಿ ಸಮೀಪದಲ್ಲೇ 9 ಎಕರೆ ಪ್ರದೇಶ ಆಯ್ಕೆಮಾಡಿಲಾಗಿದೆ . ಮಂಗಳೂರು ಮಾಹಾನಗರ ಪಾಲಿಕೆಯಲ್ಲಿ ಬಡವರ 3500 ವನತಿ ನಿವಾಶನಲ್ಲಿ ಅರ್ಜಿಗಳು ಕಳೆದ ಹಲವಾರು ವರ್ಷಗಳಿಂದ ಕೊಳೆಯುತ್ತಿವೆ. ಆದರೆ ಬಿಜೆಪಿ ಅವರು ಆಧಿಕಾರದಲ್ಲಿದ್ದಾಗ ಈ ಕುರಿತು ಹಮನ ಹರಿಸಿರಲಿಲ್ಲ . ಅದರೆ ನಾನು ಶಾಸಕ ನಾದ ಬಳಿಕ ಈ 3500 ಅರ್ಜಿಗಳ ಪೈಕಿ 1100 ಫಲಾನುಭವಿಗಳನ್ನು ಗುರುತಿಸಿ ಆಯ್ಕೆ ಮಾಡಲಾಯಿತು ಎಂದು ತಿಳಿಸಿದರು.
ನಾನು ಶಾಸಕನಾದ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಭಾರಿ ಶ್ರಮ ವಹಿಸಿದ್ದೇನೆ. ಕಳೆದ 3 ವರ್ಷಗಳ ಪ್ರಯತ್ನದ ಫಲವಾಗಿ ಈ ಯೋಜನೆಗೆ ಸರಕಾರದಿಂದ ಮೋಜೂರಾತಿ ದೊರೆತು ಟೆಂಡರ್ ಕೂಡ ಆಗಿದೆ.
ಆದರೆ ಸಿಪಿಐಎಂ ಅಭ್ಯರ್ಥಿ ಸುನೀಲ್ ಕುಮಾರ್ ಬಜಾಲ್ ಹಾಗು ಬಿಜೆಪಿ ಮುಖಂಡ ಪ್ರೇಮಾನಂದ ಶೆಟ್ಟಿ ಈ ಯೋಜನೆ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಯಲ್ಲಿ ಎಲ್ಲಾ ಪಕ್ಷದ ಮುಖಂಡರು ಭಾಗ ವಹಿಸಿದ್ದರೂ ಈಗ ಚುನಾವಣೆ ಸಂದರ್ಭದಲ್ಲಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು ಅರೋಪಿಸಿದರು.