FILM
ತುಳು ಚಿತ್ರರಂಗ ಈಗ ದೊಡ್ಡದಾಗಿ ಬೆಳೆದಿದೆ – ಚಿತ್ರನಟ ಕಿಚ್ಚ ಸುದೀಪ್
ತುಳು ಚಿತ್ರರಂಗ ಈಗ ದೊಡ್ಡದಾಗಿ ಬೆಳೆದಿದೆ – ಚಿತ್ರನಟ ಕಿಚ್ಚ ಸುದೀಪ್
ಮಂಗಳೂರು ಎಪ್ರಿಲ್ 29: ತುಳು ಚಿತ್ರರಂಗ ತುಂಬಾ ಬೆಳೆದಿದ್ದು ತುಳುಚಿತ್ರರಂಗವನ್ನು ಪುಟ್ಟ ಚಿತ್ರರಂಗ ಎಂದು ಕರೆಯಲು ಸಾಧ್ಯವಿಲ್ಲ ಎಂದು ಖ್ಯಾತ ಚಿತ್ರನಟ ಸುದೀಪ್ ಹೇಳಿದ್ದಾರೆ.
ಇಂದು ನಗರದ ಪುರಭವನದಲ್ಲಿ ನಡೆದ ತುಳು ಚಿತ್ರ ಕಟಪಾಡಿ ಕಟ್ಟಪ್ಪ ಚಿತ್ರ ಆಡಿಯೋ ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 1971ರಿಂದ ತುಳು ಚಿತ್ರರಂಗ ಭಾರತೀಯ ಚಿತ್ರರಂಗದಲ್ಲಿದ್ದು, ಇದನ್ನು ಪುಟ್ಟ ಚಿತ್ರರಂಗ ಎಂದು ಕರೆಯಲು ಆಗುವುದಿಲ್ಲ. ತುಳು ಚಿತ್ರರಂಗ ಕೂಡ ದೊಡ್ಡ ಚಿತ್ರರಂಗವಾಗಿ ಬೆಳೆದಿದೆ ಎಂದು ಹೇಳಿದರು. ಕನ್ನಡ ಚಿತ್ರರಂಗ ಹತ್ತಿರದಲ್ಲೆ ಇರುವಾಗ ಇಲ್ಲಿನ ಚಿತ್ರ ನಿರ್ಮಾಪಕರು ಪ್ರಿತಿಯಿಂದ ತುಳು ಚಿತ್ರ ನಿರ್ಮಿಸುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದ ಅವರು ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು.
ತುಳು ಚಿತ್ರರಂಗ ಕನ್ನಡ ಚಿತ್ರರಂಗದ ಸಹೋದರಿ ಸಂಸ್ಥೆ ಇದ್ದ ಹಾಗೆ ಎಂದು ಹೇಳಿದ ಅವರು ತುಳು ಚಿತ್ರರಂಗಕ್ಕೆ ನಮ್ಮಿಂದ ಎನಾದರೂ ಸಹಾಯ ಬೇಕಾದರೆ ಸದಾ ಸಿದ್ದ ಎಂದು ಹೇಳಿದರು. ತುಳು ಚಿತ್ರರಂಗ ಅತ್ಯುತ್ತಮ ಚಿತ್ರಗಳನ್ನು ನಿರ್ಮಿಸಿ ಬೆಂಗಳೂರಿನಲ್ಲಿ ಕೂಡ ಪ್ರದರ್ಶನವಾಗುವಂತೆ ಆಗಲಿ ಎಂದು ಅವರು ಸಂದರ್ಭದಲ್ಲಿ ಆಶಿಸಿದರು.
ಈ ಸಂದರ್ಭದಲ್ಲಿ ಕಟಪಾಡಿ ಕಟ್ಟಪ್ಪ ಚಿತ್ರದ ಆಡಿಯೋವನ್ನು ಸುದೀಪ್ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಕಟಪಾಡಿ ಚಿತ್ರದ ಕಲಾವಿದರು ಉಪಸ್ಥಿತರಿದ್ದರು.