Connect with us

FILM

ಕೊನೆಯದಾಗಿ ನನ್ನ ಮುಖ ನೋಡಿಬಿಡಿ ಡ್ಯಾಡಿ ಎಂದು ಆರನೇ ಮಹಡಿಯಿಂದ ಜಿಗಿದ ಮಾಡೆಲ್

ಜೋದ್ ಪುರ : ತನ್ನ ತಂದೆಗೆ ವಿಡಿಯೋ ಕಾಲ್ ಮಾಡಿ ಮಾಡೆಲ್ ಒಬ್ಬಳು ಹೊಟೇಲ್ ಒಂದರ ಆರನೆ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.


ಮಾಡೆಲ್ ಗುಂಗುನ್‌ ಉಪಾಧ್ಯಾಯ ಆತ್ಮಹತ್ಯೆಗೆ ಯತ್ನಿಸಿದವರು ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.


ಉದಯಪುರದಿಂದ ಜೋಧ್‍ಪುರಕ್ಕೆ ಆಗಮಿಸಿದ ಗುಂಗುನ್‌, ಅಲ್ಲಿ ಹೋಟೆಲ್‌ ಒಂದರಲ್ಲಿ ಉಳಿದುಕೊಂಡಿದ್ದಾರೆ. ನಂತರ ತಮ್ಮ ತಂದೆಗೆ ವಿಡಿಯೋ ಕಾಲ್‌ ಮಾಡಿದ ಈಕೆ, ‘ಕೊನೆಯದಾಗಿ ನನ್ನ ಮುಖ ನೋಡಿಬಿಡಿ ಡ್ಯಾಡಿ. ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ಅವರ ತಂದೆ ಮಾತನಾಡುವ ಮುನ್ನವೇ ಕಾಲ್‌ ಕಟ್ ಆಗಿದೆ.


ಇದರಿಂದ ಭಯಗೊಂಡ ಅವರ ತಂದೆ ಗಣೇಶ್‌ ಉಪಾಧ್ಯಾಯ ಅವರು, ಪೊಲೀಸರಿಗೆ ಕಡೆ ಮಾಡಿ ಮಾಹಿತಿ ನೀಡಿದ್ದಾರೆ. ಮಗಳು ಎಲ್ಲಿ ಉಳಿದುಕೊಂಡಿದ್ದಾಳೆ ಎಂಬ ಸುಳಿವು ಕೂಡ ಅವರಿಗೆ ಇರಲಿಲ್ಲ.


ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಫೋನ್‌ ಟ್ರೇಸ್‌ ಮಾಡಿ ಗುಂಗುನ್ ಇರುವ ಸ್ಥಳ ಪತ್ತೆ ಹಚ್ಚಿದ್ದಾರೆ. ಪೊಲೀಸರು ಸ್ಥಳಕ್ಕೆ ಹೋಗುವ ಮುನ್ನವೇ ಹೋಟೆಲ್‍ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಆದರೆ ಕಾಲು ಮತ್ತು ಎದೆಯ ಭಾಗದ ಮೂಳೆಗಳು ಮುರಿದು ಹೋಗಿರುವ ಕಾರಣ ಸಾವು -ಬದುಕಿನ ನಡುವೆ ಇದೀಗ ಹೋರಾಡುತ್ತಿದ್ದಾರೆ.

Advertisement
Click to comment

You must be logged in to post a comment Login

Leave a Reply