Connect with us

LATEST NEWS

ಜೀವನದಲ್ಲಿ ಜಿಗುಪ್ಸೆ – ಆತ್ಮಹತ್ಯೆಗೆ ಶರಣಾದ ಮಾಜಿ ಮಿಸ್ ಅಮೆರಿಕ ಚೆಸ್ಲಿ ಕ್ರಿಸ್ಟ್

ನ್ಯೂಯಾರ್ಕ್: ಮಾಜಿ ಮಿಸ್ ಅಮೆರಿಕ ಮಾಡೆಲ್ ಚೆಸ್ಲಿ ಕ್ರಿಸ್ಟ್ ಆತ್ಮಹತ್ಯೆಗೆ ಶರಣಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಈ ಕೃತ್ಯ ಎಸಿಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

ನ್ಯೂಯಾರ್ಕ್‌ನ ಮ್ಯಾನ್‌ಹ್ಯಾಟನ್‌ ಪ್ರದೇಶದ ಕಟ್ಟಡವೊಂದರಿಂದ ಜಿಗಿದು ಚೆಸ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 30 ವರ್ಷದ ಈ ಮಾಡೆಲ್ 2019 ರಲ್ಲಿ ಮಿಸ್ ಯುಎಸ್ಎ ಗೆದ್ದಿದ್ದರು‌. ‘ಚೆಸ್ಲಿ ನಿಧನದಿಂದ ನಮಗೆ ತೀವ್ರ ಆಘಾತವಾಗಿದೆ‘ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

ಚೆಸ್ಲಿ ಆತ್ಮಹತ್ಯೆಗೂ ಮುನ್ನ ಈ ದಿನ ನಿಮ್ಮ ಬಾಳಿನಲ್ಲಿ ಶಾಂತಿ ನೆಮ್ಮದಿ ತರಬಹುದು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ‌. ಚೆಸ್ಲಿ ಅವರು ಅಮೆರಿಕದ ಮನರಂಜನಾ ಚಾನೆಲ್ ಎಕ್ಸ್‌ಟ್ರಾ ಟಿವಿಗೆ ನಿರೂಪಕಿಯಾಗಿ ಗಮನ ಸೆಳೆದಿದ್ದರು.

Advertisement
Click to comment

You must be logged in to post a comment Login

Leave a Reply