TECHNOLOGY
ಜಿಯೋ ಗಣರಾಜ್ಯೋತ್ಸವದ ಕೊಡುಗೆ ಶೇಕಡ 50 ರಷ್ಟು ಅಧಿಕ ಡೇಟಾ

ಜಿಯೋ ಗಣರಾಜ್ಯೋತ್ಸವದ ಕೊಡುಗೆ ಶೇಕಡ 50 ರಷ್ಟು ಅಧಿಕ ಡೇಟಾ
ಮಂಗಳೂರು ಜನವರಿ 23: ಮುಖೇಶ್ ಅಂಬಾನಿ ನೇತೃತ್ವದ ‘ಜಿಯೋ’ ಟೆಲಿಕಾಂ ಕ್ಷೇತ್ರ ಪ್ರವೇಶಿಸಿದ ನಂತರ ಹೊಸ ಬಿರುಗಾಳಿಯನ್ನೇ ಎಬ್ಬಿಸಿದೆ. ಇದು ಉಚಿತವಾಗಿ ಹಾಗು ಕಡಿಮೆ ಬೆಲೆಯಲ್ಲಿ ಹೆಚ್ಚು ಡೇಟಾ ಮತ್ತು ಅನ್ ಲಿಮಿಟೆಡ್ ಕರೆ ಆಫರ್ ಗಳನ್ನು ನೀಡುವುದರ ಮೂಲಕ ಗ್ರಾಹಕರನ್ನು ಸೆಳೆಯಿತು.
ಇದೀಗ ಜಿಯೋ ಮತ್ತೆ ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡಲಿದ್ದು, ಗಣರಾಜ್ಯೋತ್ಸವದ ಅಂಗವಾಗಿ ಜನವರಿ 26 ರಿಂದ ತನ್ನ ಎಲ್ಲಾ ಗ್ರಾಹಕರ ಪ್ರತಿದಿನದ ಡೇಟಾ ವನ್ನು ಶೇಕಡ 50 ರಷ್ಟು ಹೆಚ್ಚಿಸಿದೆ. ಅಂದರೆ ದಿನಕ್ಕೆ 1 ಜಿಬಿ ಡೇಟಾ ಬದಲಿಗೆ ಜನವರಿ 26 ರಿಂದ ಹೆಚ್ಚುವರಿಯಾಗಿ ಡೇಟಾ ಸಿಗಲಿದ್ದು ದಿನಕ್ಕೆ 1.5 ಜಿಬಿ ಡೇಟಾ ಸಿಗಲಿದೆ. ಇದು ಎಲ್ಲಾ ರೀತಿಯ ರಿಚಾರ್ಜ್ ಗಳಿಗೂ ಅನ್ವಯಿಸಲಿದೆ.
