Connect with us

  LATEST NEWS

  ಒಂದೇ ಡ್ಯಾನ್ಸ್ ಗೆ ಸ್ಟಾರ್ ಆದ ಉಪನ್ಯಾಸಕಿ

  ಮಂಗಳೂರು ಸೆಪ್ಟೆಂಬರ್ 14: ಮಾಹಿತಿ ತಂತ್ರಜ್ಞಾನ ಅಥವಾ ಇಂಟರ್ನೆಟ್ ಯುಗ ಎಷ್ಟು ಫಾಸ್ಟ್ ಆಗಿದೆ ಅಂದ್ರೆ ಅದನ್ನು ನಿರ್ಧರಿಸುವುದೇ ಕಷ್ಟ .ಅದರ ವ್ಯಾಪ್ತಿ ದಿಗಂತ ದಷ್ಟು ಅಗೋಚರ .ಆದ್ರೆ ಶಕ್ತಿ ಉಹಿಸಲು ಸಾಧ್ಯವಿಲ್ಲ .
  ಇಂಟರ್ನೆಟ್ ನ ಶಕ್ತಿ ಎಂತಹುದೆಂದರೆ ರಾತ್ರಿ ಬೆಳಗಾಗುವುದರಲ್ಲಿ ಜೀರೊ ಆಗಿದ್ದವರು ಒಮ್ಮೆಲೇ ಸ್ಟಾರ್ ಆಗಿಬಿಡುತ್ತಾರೆ . ಅಂತಹುದೊಂದು ಪುಟ್ಟ ಕತೆ ಕೇರಳದ ಉಪನ್ಯಾಸಕಿ ಶಿರಿಲ್ ಕಾಡವನ್ ಅವರದ್ದು. ಮಕ್ಕಳಿಗೆ ಪಾಠ ಹೇಳುವ ಉಪನ್ಯಾಸಕಿ ರಾತ್ರೋರಾತ್ರಿ ಸ್ಟಾರ್ ಆಗಿ ಬಿಟ್ಟಿದ್ದಾರೆ .

  ಯು ಟೂಬ್ ನಲ್ಲಿ ಟಾಪ್  ಟ್ರೆಂಡಿಂಗ್ ವಿಡಿಯೋ

  ದೇವರ ಸ್ವಂತ ನಾಡು ಕೇರಳದ ಓಣಂ ಸಂದರ್ಭದಲ್ಲಿ ಪ್ರದರ್ಶಿಸಿದ ಡ್ಯಾನ್ಸ್ ಅವರನ್ನು ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೆ ಏರಿಸಿದೆ .
  ಕೇರಳದ ಕೊಚ್ಚಿಯಲ್ಲಿ ಅಕೌಂಟೆನ್ಸಿಯ ಉಪನ್ಯಾಸಕಿಯಾಗಿರುವ ಶಿರಿಲ್ ಕಾಡವನ್ ಓಣಂ ಸಂಭ್ರಮಾಚರಣೆ ಅಂಗವಾಗಿ ತಮ್ಮ ಕಾಲೇಜಿನಲ್ಲಿ ಮಾಲಿವುಡ್ ನ ಪ್ರಸಿದ್ಧ ‘ವೆಲ್ಲಿ ಪಡಿಂತೆ ಪುಸ್ತಕಂ ‘ ಚಿತ್ರದ ಪ್ರಸಿದ್ಧ ಸಾಂಗ್ ‘ಜಿಮ್ಕಿ ಕಮಾಲ್’ ಹಾಡಿಗೆ ವಿದ್ಯಾರ್ಥಿಗಳೊಂದಿಗೆ ಸ್ಟೆಪ್ ಹಾಕಿದ್ದರು.

  ಈ ಡ್ಯಾನ್ಸ್ ನ ವಿಡಿಯೋ ವನ್ನು ವಿದ್ಯಾರ್ಥಿಗಳು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು .
  ಈ ಡ್ಯಾನ್ಸ್ ದೃಶ್ಯಾವಳಿ ರಾತ್ರೋರಾತ್ರಿ ಶಿರಿಲ್ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟಿದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಒಂದು ಕೋಟಿ ಜನ ವೀಕ್ಷಿಸಿದ್ದಾರೆ .ಈ ಡ್ಯಾನ್ಸ್ ವಿಡಿಯೋ ಅಪ್ಲೋಡ್ ಆದ ಒಂದೇ ರಾತ್ರಿಯಲ್ಲಿ 6 ಲಕ್ಷ ಜನ ಅದನ್ನು ವೀಕ್ಷಿಸಿದ್ದಾರೆ .

  ಶಿರಿಲ್ ಗೆ ಪಿಲ್ಮ್ ಗಳ ಆಫರ್

  ದಿನ ಬೆಳಗಾಗುವುದರೊಳಗೆ ಶಿರಿಲ್ ಎಷ್ಟು ಪ್ರಖ್ಯಾತರಾದರು ಎಂದರೆ ಅವರಿಗೆ ಫಿಲ್ಮ್ ಗಳ ಆಫರ್ ಗಳು ಕೂಡ ಬರತೊಡಗಿವೆ. ಈಗಾಗಲೇ ತಮಿಳು ಹಾಗೂ ಮಲೆಯಾಳಂ ಚಿತ್ರದ ನಿರ್ದೇಶಕರು ಶಿರಿಲ್ ಗೆ ಚಲನಚಿತ್ರದಲ್ಲಿ ರೋಲ್ ಗಳನ್ನು ಆಫರ್ ಮಾಡಿದ್ದಾರೆ .
  ಒಂದೇ ಒಂದು ರಾತ್ರಿಯಲ್ಲಿ ಶಿರಿಲ್ ಅವರ ಜೀವನವೇ ಈಗ ಬದಲಾಗಿ ಹೋಗಿದೆ .ಶಿರಿಲ್ ಅವರ ಅಭಿಮಾನಿಗಳ ದೊಡ್ಡ ಗುಂಪೇ ರಚನೆಯಾಗಿದೆ .
  ಇನ್ನೊಂದೆಡೆ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಹಾಗೂ ಟ್ವಿಟ್ಟರ್ ಖಾತೆಗಳು ತೆರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಈ ಬೆಳವಣಿಗೆ ಶಿರಿಲ್ ಅವರನ್ನು ಆತಂಕ ಪಡಿಸಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಮಿಕ್ಕಿ ಕಮಾಲ್ ಹಾಡಿಗೆ ಶಿರಿಲ್ ಹಾಕಿದ ಸ್ಟೆಪ್ಸ್ ಈಗ ವಿಶ್ವಾದ್ಯಂತ ಸದ್ದು ಮಾಡುತ್ತಿದೆ .

  VIDEO

  Share Information
  Advertisement
  Click to comment

  You must be logged in to post a comment Login

  Leave a Reply