Connect with us

    DAKSHINA KANNADA

    ಸಿಡಿಲು ಬಡಿದು ಮಹಿಳೆ ಸಾವು.

    ಪುತ್ತೂರು,ಸೆಪ್ಟಂಬರ್,14: ಸಿಡಿಲು ಬಡಿದು ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ಪುತ್ತೂರು ತಾಲೂಕಿನ ಐತೂರು ಗ್ರಾಮದ ತುಂಬ್ಯಾ ಎಂಬಲ್ಲಿ ನಡೆದಿದೆ. ತುಂಬ್ಯಾ ಮನೆ ನಿವಾಸಿ ಶೀಬಾ (36) ಸಿಡಿಲು ಬಡಿದು ಸಾವಿಗೀಡಾದ ಮಹಿಳೆಯಾಗಿದ್ದಾರೆ. ಸಿಡಿಲು ಬರುತ್ತಿದೆ ಎಂದು ಮನೆಯಲ್ಲಿರುವ ವಿದ್ಯುತ್ ಪ್ಲಗ್ ಗಳನ್ನು ತಪ್ಪಿಸುತ್ತಿದ್ದ ಸಂದರ್ಭದಲ್ಲಿ ನೇರವಾಗಿ ಶೀಬಾ ಅವರ ಮೇಲೆಯೇ ಸಿಡಿದು ಬಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಮನೆ ಮಂದಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply