KARNATAKA
ಗದ್ದೆಯಲ್ಲಿ ಮಲಗಿದ್ದವರ ಮೇಲೆ ಹರಿದ ಜೆಸಿಬಿ ಮೂವರು ಸಾವು….!!
ಜಾಲಹಳ್ಳಿ : ಬೋರ್ ವೆಲ್ ಕೆಲಸ ಮುಗಿಸಿ ಗದ್ದೆಯಲ್ಲಿ ಮಲಗಿದ್ದ ಮೂವರ ಮೇಲೆ ಜೆಸಿಬಿ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಸಾವನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಜಾಲಹಳ್ಳಿ ಸಮೀಪದ ನಿಲವಂಜಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಛತ್ತೀಸ್‌ಗಢ ಮೂಲದ ಕೃಷ್ಣಾ(25) ಶಿವುರಾಮ(30), ಬಲರಾಮ(28) ಎಂದು ಗುರುತಿಸಲಾಗಿದೆ. ಬೋರ್‌ವೆಲ್ ಕೆಲಸ ಮುಗಿಸಿಕೊಂಡು ಜಮೀನಿನಲ್ಲೇ ಮಲಗಿದ್ದ ವೇಳೆ ಈ ದುರಂತ ನಡೆದಿದೆ.
ನಿಲುಂಜಿ ಗ್ರಾಮದ ನಿವಾಸಿಯಾದ ಬಾಲಯ್ಯ ಎಂಬುವರಿಗೆ ಸೇರಿದ್ದ ಜೆಸಿಬಿ ಯಂತ್ರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
You must be logged in to post a comment Login