LATEST NEWS
ಪೊಲೀಸ್ ಠಾಣೆ ಪಕ್ಕದಲ್ಲೇ ಮೊದಲ ರಾತ್ರಿಯ ಸಂಭ್ರಮದ ಬ್ಯಾನರ್….!!
ಮಂಗಳೂರು ಜೂನ್ 14: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಬ್ಯಾನರ್ ಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ಬ್ಯಾನರ್ ಗಳ ನಡುವೆ ಇದೀಗ ಯುವಕನೊಬ್ಬನ ಫಸ್ಟ್ ನೈಟ್ ಬ್ಯಾನರ್ ಕೂಡ ಎದ್ದು ನಿಂತಿದೆ.
ಕದ್ರಿ ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಗೆ ತಾಗಿಕೊಂಡಂತೆ ಈ ಬ್ಯಾನರ್ ಹಾಕಲಾಗಿದೆ. ಯುವಕನೊಬ್ಬನ ಮದುವೆಯ ಮೊದಲ ರಾತ್ರಿಯ ಸಂಭ್ರಮ ಎಂದು ಮತ್ತೊಂದು ಹೋರ್ಡಿಂಗ್ಸ್ ಹಾಕಲಾಗಿದೆ. ರಾತ್ರಿಯಿಡೀ ಹೋರಾಡಿ ಗೆದ್ದು ಬಾ ಎಂದು ಗೆಳೆಯರು ಹಾರೈಸಿ ಸರಕಾರಿ ಜಾಗದಲ್ಲಿ ದೊಡ್ಡ ಸಾಧನೆ ಎಂಬಂತೆ ಹೋರ್ಡಿಂಗ್ ಹಾಕಿದ್ದಾರೆ.
ಸರಕಾರಿ ಜಾಗದಲ್ಲಿ ಯಾವುದೇ ಅನುಮತಿ ಇಲ್ಲದೆ ತಮಗೆ ಇಷ್ಟಬಂದಂತೆ ಅಶ್ಲೀಲ ಸಂದೇಶ ಸಾರುವ, ಮುಜುಗರ ತರುವ ಜಾಹೀರಾತು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಳೆಗೆ ಚಳಿಗೆ ಕಚೇರಿಯಲ್ಲಿ ಕುಳಿತಿರುವ ಅಧಿಕಾರಿಗಳು ಮೈಚಳಿ ಬಿಟ್ಟು ಇಂತಹ ಅನಧಿಕೃತ, ಮತ್ತು ಅಶ್ಲೀಲ ಬ್ಯಾನರ್‌ಗಳ ವಿರುದ್ದ ದಂಡ ಅಥವಾ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.